ಭಾನುವಾರ, ಆಗಸ್ಟ್ 18, 2019
24 °C

ಬಿಎಸ್ಎನ್ಎಲ್‌ಗೆ ಡೀಸೆಲ್ ಕೊರತೆ: ವಿಕೋಪ ಪರಿಹಾರ ನಿಧಿಯಿಂದ ಹಣ ಬಿಡುಗಡೆ

Published:
Updated:

ಹಾಸನ: ನೆರೆ ಸಂತ್ರಸ್ತರಿಗೆ ನೆರವು ನೀಡುವ ಸಲುವಾಗಿ ಡೀಸೆಲ್ ಖರೀದಿಸಲು ಬಿಎಸ್ಎನ್ಎಲ್‌ಗೆ  ಜಿಲ್ಲಾಧಿಕಾರಿ ಅವರು ವಿಕೋಪ ಪರಿಹಾರ ನಿಧಿಯಿಂದ ಹಣ ನೀಡಿದ್ದಾರೆ.

ಸಕಲೇಶಪುರ, ಬೇಲೂರು, ಆಲೂರು ತಾಲ್ಲೂಕಿನಲ್ಲಿ ಬಿಎಸ್ಎನ್ಎಲ್ ನೆಟ್‌ವರ್ಕ್‌ ಇಲ್ಲದೆ ಅಧಿಕಾರಿಗಳು ಪರಿಹಾರ ಕಾರ್ಯ ಕೈಗೊಳ್ಳಲು ತೊಂದರೆ ಆಗಿತ್ತು. 

ಮಳೆ ಕೊರತೆಯಿಂದ ವಿದ್ಯುತ್ ಕಡಿತವಾಗಿ ಬಿಎಸ್ಎನ್ಎಲ್ ಟವರ್‌ಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಸಂಸ್ಥೆ ಬಳಿ ಇರುವ ಜನರೇಟರ್ ಕಾರ್ಯ ನಿರ್ವಹಿಸಲು ಡೀಸೆಲ್ ಸಹ ಖಾಲಿಯಾಗಿತ್ತು.  

ಬಿಎಸ್ಎನ್ಎಲ್ ಅಧಿಕಾರಿ ಮನವಿ ಮೇರೆಗೆ ಡೀಸೆಲ್‌ಗಾಗಿ ಶನಿವಾರ ರಾತ್ರಿ ಜಿಲ್ಲಾಧಿಕಾರಿ ಹಣ ಬಿಡುಗಡೆಗೆ ಆದೇಶಿಸಿದರು.

ಈಗ ಡೀಸೆಲ್ ಖರೀದಿಸಿ ಜನರೇಟರ್ ಮೂಲಕ ನೆಟ್‌ವರ್ಕ್‌ ಕಾರ್ಯ ನಿರ್ವಹಿಸುವಂತೆ ಮಾಡಲಾಗಿದೆ. 

ಅಧಿಕಾರಗಳು ವಿವಿಧ ಇಲಾಖೆಗಳ ಜತೆ ಸಮನ್ವಯತೆ ಸಾಧಿಸಿ ಪರಿಹಾರೋಪಾಯ  ಕಾರ್ಯದಲ್ಲಿ ನಿರತರಾಗಿದ್ದಾರೆ.

Post Comments (+)