ಮಂಗಳವಾರ, ಜೂನ್ 2, 2020
27 °C
ಹೇಮಾವತಿ ಹಿನ್ನೀರಿನಲ್ಲಿ ಘಟನೆ, ಈಜಲು ತೆರಳಿದ್ದಾಗ ದುರ್ಘಟನೆ

ಕೊಡಗು: ಯೋಧ ಸೇರಿ ಇಬ್ಬರು ನೀರುಪಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶನಿವಾರಸಂತೆ: ಸೋಮವಾರಪೇಟೆ ತಾಲ್ಲೂಕಿನ ಕಟ್ಟೆಪುರ ಸಮೀಪದ ಹೇಮಾವತಿಯ ಹಿನ್ನೀರಿನಲ್ಲಿ ಈಜಲು ತೆರಳಿದ್ದ ಯೋಧ ಸೇರಿ ಇಬ್ಬರು ನೀರುಪಾಲಾದ ಘಟನೆ ಶನಿವಾರ ನಡೆದಿದೆ.

ತಾಲ್ಲೂಕಿನ ಬೆಸೂರು ನಿವಾಸಿಯೂ ಆಗಿರುವ ಯೋಧ ಲೋಕೇಶ್ (30) ಹಾಗೂ ಲತೇಶ್ (27) ನೀರುಪಾಲದವರು. ಯೋಧ ಲೋಕೇಶ್‌ ಅವರ ಮೃತದೇಹ ಸಿಕ್ಕಿದೆ. ಲತೇಶ್ ಅವರ ಮೃತದೇಹಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಕುಟುಂಬಸ್ಥರೊಂದಿಗೆ ಈಜಲು ತೆರಳಿದ್ದರು ಎನ್ನಲಾಗಿದೆ. 

ಲೋಕೇಶ್‌ ಅವರು ಕಳೆದ ವಾರವಷ್ಟೇ ಹಾಸನ ಜಿಲ್ಲೆ ಅರಕಲಗೂಡಿನ ಯುವತಿಯೊಂದಿಗೆ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. 2009ರಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಶನಿವಾರಸಂತೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು