ಬುಧವಾರ, ಜೂನ್ 3, 2020
27 °C

ಕೋವಿಡ್-19ಗೆ ಒಂದು ದೇಶ ಸಂಪೂರ್ಣ ನಾಶ: ಕೋಡಿಮಠದ ಸ್ವಾಮೀಜಿ ಭವಿಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರಸೀಕೆರೆ: ಕೋವಿಡ್ 19 ವೈರಸ್ ನಿಗ್ರಹಕ್ಕೆ ನಿಸರ್ಗದಿಂದಲೇ ಔಷಧ ದೊರೆಯಬೇಕು. ಈ ವೈರಾಣುವಿನಿಂದ ಭೂಪಟದಲ್ಲಿ ಒಂದು ದೇಶ ಸಂಪೂರ್ಣವಾಗಿ ಅಳಿಸಿಹೋಗುವ ಸಾಧ್ಯತೆ ಇದೆ ಎಂದು ತಾಲ್ಲೂಕಿನ ಸುಕ್ಪೇತ್ರ ಕೋಡಿಮಠದ ಶ್ರೀ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.

ತಾಲ್ಲೂಕಿನ ಹಾರನಹಳ್ಳಿ ಸುಕ್ಪೇತ್ರ ಕೋಡಿಮಠ ಮಹಾ ಸಂಸ್ಥಾನದಲ್ಲಿ ಮಾತನಾಡಿದ ಅವರು ದೊಡ್ಡ ದೊಡ್ಡ ನಗರಗಳಿಗೆ ಕೋವಿಡ್ 19 ವೈರಸ್ಸಿನಿಂದ ಅಪಾಯ ತಪ್ಪಿದ್ದಲ್ಲ. ಸಾಧು ಸಂತರು ಜಪತಪಗೈದಿರುವ ಪುಣ್ಯಭೂಮಿ ಭಾರತಕ್ಕೆ ಕೋವಿಡ್ 19 ವೈರಸ್ಸಿನಿಂದ ಹೆಚ್ಚಿನ ಹಾನಿ ಹಾಗೂ ತೊಂದರೆ ಇಲ್ಲ. ಈ ರೋಗವನ್ನು ನಿಯಂತ್ರಿಸಲಾಗದೇ ಅನೇಕರು ತಮ್ಮ ಪಟ್ಟ ಕಳೆದುಕೊಳ್ಳಲಿದ್ದಾರೆ. ಜಗತ್ತಿನಲ್ಲಿ ಇನ್ನೂ ಕೋವಿಡ್ 19 ವೈರಸ್ ಹೆಚ್ಚು ವ್ಯಾಪಿಸಲಿದೆ ಎಂದರು.

ಸಲಹೆ: ಅಕ್ಷಯ ನಾಮ ತಿಥಿವರೆಗೆ ಅಬ್ಬರಿಸಿ ಮೇ ತಿಂಗಳ ವೇಳೆಗೆ ಒಂದು ಹಂತ ತಲುಪಲಿದೆ. ಎಲ್ಲರೂ ರಾತ್ರಿ ಮಲಗುವಾಗ ಬಿಲ್ವಾ ಪತ್ರೆ ಹಾಗೂ ಬೇವಿನ ಸೊಪ್ಪು ಗಳನ್ನು ಹತ್ತಿರದಲ್ಲಿಟ್ಟುಕೊಂಡು ಮಲಗಬೇಕು ಹಾಗೂ ಮನೆಯಲ್ಲಿ ಸದಾ ದೀಪ ಉರಿಸುತ್ತಿರಬೇಕು . ಮುಂದಿನ ದಿನಗಳಲ್ಲಿ ದೇಶ ಮತ್ತು ರಾಜ್ಯದಲ್ಲಿ ಹೊಸ ಹೊಸ ಕಾನೂನುಗಳು ಜಾರಿಯಾಗಲಿವೆ. ಅವುಗಳ ಸಾಧಕ ಬಾಧಕಗಳ ಬಗ್ಗೆ ಚಿಂತಿಸಿ ಅರಸ ಆ ಕಾನೂನುಗಳನ್ನು ಜಾರಿಗೊಳಿಸಿದರೆ ಒಳಿತು. ಇಲ್ಲದಿದ್ದರೆ ಪ್ರಜೆಗಳು ದಂಗೆ ಏಳುವ ಸಾಧ್ಯತೆ ಹೆಚ್ಚು. ಇದರಿಂದ ಅರಸನ ಓಟಕ್ಕೆ ಭಂಗ ಉಂಟಾಗುವ ಸಾಧ್ಯತೆ ಇದೆ ಎಂದರು.

ಮುಂದಿನ ದಿನಗಳಲ್ಲಿ ಗಿಡ ಮರ ಪ್ರಾಣಿಗಳಿಗೂ ಅಪ್ಪಳಿಸುವ ಸಾಧ್ಯತೆಯಿದೆ ಎಂದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೆಸರು ಹೇಳದೇ ಅವರ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ ಅವರು ’ದೊರೆ ಮನೆಗೆ ವಾಸ ಹೋಗಿರುವುದನ್ನು (ಕಾವೇರಿ ನಿವಾಸಕ್ಕೆ) ಮರು ಪರಿಶೀಲನೆ ಮಾಡಿದರೆ ಒಳ್ಳೆಯದು. ಆ ಮನೆಯಿಂದ ಸುಖ ದುಃಖ ಕಾಡುತ್ತದೆ‘ ಎಂದು ಎಚ್ಚರಿಸಿದರು.

ಇದನ್ನೂ ಓದಿ... ರಾಜ್ಯ ಬಿಜೆಪಿ ಸರ್ಕಾರಕ್ಕೆ ಏನೂ ಆಗದು: ಕೋಡಿಮಠದ ಸ್ವಾಮೀಜಿ ಭವಿಷ್ಯ

ಮುಂದಿನ ದಿನಗಳಲ್ಲಿ ಮಳೆ ಹೆಚ್ಚಾಗಲಿದೆ. ಇದರಿಂದ ಗ್ರಾಮೀಣ ನಿವಾಸಿಗಳಿಗೆ ತೀವ್ರ ಸ್ವರೂಪದ ತೊಂದರೆಯಾಗಬಹುದು. ಅಶ್ಚಿಜದಿಂದ ಕಾರ್ತಿಕದವರೆಗೆ ಗ್ರಾಮ ವಾಸಿಗಳಿಗೆ ತೊಂದರೆ, ಮನೆಯಲ್ಲಿ ದೀಪ ಹಚ್ಚಿ ಪ್ರಾರ್ಥನೆ ಮಾಡಿದರೆ ಒಳ್ಳೆಯದು. ಸರ್ಕಾರ ಕೈಗೊಳ್ಳುವ ನಿರ್ಧಾರಗಳಿಗೆ ಸಾರ್ವಜನಿಕರು ಸಹಕರಿಸಬೇಕು, ಇಲ್ಲದಿದ್ದರೆ ಸಾವಿಗೆ ಆಹ್ವಾನ ನೀಡಿದಂತ್ತಾಗುತ್ತದೆ, ಭೂಮಿ ಕಂಪಿಸಬಹುದು ಪಂಚಭೂತಗಳಿಂದ ತೊಂದರೆ ಇದೆ ಸಮುದ್ರದ ಒಡಲು ಬಿಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸಿದರು .

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು