ಶಾಸಕ ಕೆ.ಸಿ.ನಾರಾಯಣಗೌಡ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಮಂಡ್ಯ: ಬಜೆಟ್ ಅಧಿವೇಶನಕ್ಕೆ ಗೈರಾಗಿದ್ದ ಕೆ.ಆರ್.ಪೇಟೆಯ ಜೆಡಿಎಸ್ ಶಾಸಕ ಕೆ.ಸಿ.ನಾರಾಯಣಗೌಡ ಅವರಿಗೆ ಫುಡ್ ಪಾಯ್ಸನ್ ಆಗಿದ್ದು, ಮುಂಬೈನ ಜಸ್ಲೋಕ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕಿತ್ಸೆ ಪಡೆಯುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ... ರೇವಣ್ಣ ಹಸ್ತಕ್ಷೇಪಕ್ಕೆ ಬೆದರಿಕೆ ತಂತ್ರ; ಸದನಕ್ಕೆ ಕೆ.ಸಿ.ನಾರಾಯಣಗೌಡ ಗೈರು
‘ಕಾರಣಾಂತರದಿಂದ ಫುಡ್ ಪಾಯ್ಸನ್ನಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಬಜೆಟ್ ಅಧಿವೇಶನಕ್ಕೆ ಬರಲು ವೈದ್ಯರು ಬಿಡುತ್ತಿಲ್ಲ. ಆಸ್ಪತ್ರೆಯಿಂದ ಬಿಡುಗಡೆಯಾದ ಕೂಡಲೇ ಅಧಿವೇಶನಕ್ಕೆ ಹಾಜರಾಗುತ್ತೇನೆ, ಜತೆಗೆ, ಕೆ.ಆರ್.ಪೇಟೆಗೂ ಬರುತ್ತೇನೆ ಎಂದು ವಿಡಿಯೊದಲ್ಲಿ ನಾರಾಯಣಗೌಡ ಹೇಳಿಕೊಂಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.