ಬುಧವಾರ, ಜನವರಿ 22, 2020
16 °C

ಲಕ್ಷ್ಮಿ ಬಸ್‌ ಸ್ಟ್ಯಾಂಡ್‌ನಲ್ಲಿ ಹೂವು ಮಾರುತ್ತಿದ್ದಳು: ರಮೇಶ ಜಾರಕಿಹೊಳಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕಾಕ: ‘ಬಸ್‌ ಸ್ಟ್ಯಾಂಡ್‌ನಲ್ಲಿ ಹೂವು ಮಾರುತ್ತಿದ್ದವಳು, ಎಸ್‌.ಟಿ.ಡಿ ಬೂತ್‌ನಲ್ಲಿ ಚಿಲ್ಲರೆ ಎಣಿಸುತ್ತಿದ್ದ ಹೆಣ್ಣುಮಗಳ ಬಗ್ಗೆ ಮಾತನಾಡಲ್ಲ’ ಎಂದು ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ವಿರುದ್ಧ ಹರಿಹಾಯ್ದರು.

ಮತ ಚಲಾಯಿಸಿದ ಬಳಿಕ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅವರ (ಲಕ್ಷ್ಮಿ) ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ನನ್ನ ಲೆವೆಲ್‌ ಬೇರೆ ಇದೆ’ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ... ಮತಗಟ್ಟೆ ಸಮೀಕ್ಷೆ: ಬಿ.ಎಸ್‌.ಯಡಿಯೂರಪ್ಪ ಸರ್ಕಾರ ಸೇಫ್‌

ಸಿದ್ದರಾಮಯ್ಯ ಅವರನ್ನೂ ಕರೆತರುವೆ: ‘ಸಿದ್ದರಾಮಯ್ಯ ಅವರು ನನ್ನ ಬಗ್ಗೆ ವೈಯಕ್ತಿಕ ಟೀಕೆ ಮಾಡಿಲ್ಲ. ಅವರನ್ನು ಬಿಜೆಪಿ ಕರೆತರಲು ಪ್ರಯತ್ನಿಸುವೆ’ ಎಂದರು.

‘ಸಹೋದರ ಸತೀಶ ಅವರ ಕುಮ್ಮಕ್ಕಿನಿಂದಲೇ ನನ್ನನ್ನು ಮನೆಯಿಂದ ಹೊರಹಾಕಲಾಗಿತ್ತು. ಬಾಲ್ಯದಿಂದಲೂ ನನ್ನ ಮೇಲೆ ಹಗೆ ತೀರಿಸಿಕೊಳ್ಳುತ್ತಿದ್ದಾನೆ. ಅವನು ತುಳಿದಷ್ಟು ನಾನು ಬೆಳೆದಿದ್ದೇನೆ. ಸಹೋದರರ ನಡುವೆ ಜಗಳ ಹಚ್ಚುವುದನ್ನೇ ಮಾಡಿದ್ದಾನೆ. ನನ್ನ ವಿರುದ್ಧ ಲಖನ್‌ನ್ನು ಎತ್ತಿಕಟ್ಟಿದ್ದಾನೆ. ಹರಾಮಿ ದುಡ್ಡು ಖಾಲಿ ಮಾಡಲು ಚುನಾವಣೆಗೆ ನಿಲ್ಲಿಸಿದ್ದಾನೆ. ಅವನ ನೆರಳು ಸಹ ನನಗೆ ಬೇಡ’ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು