ಬುಧವಾರ, ಫೆಬ್ರವರಿ 26, 2020
19 °C
ಅದಾಲತ್‌ ಲೀಗಲ್ ಏಡ್‌ ಫೌಂಡೇಷನ್‌ನಿಂದ ಸೇವೆ

‘ಮನೆ ಬಾಗಿಲಿಗೆ ಕಾನೂನು ನೆರವು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಯಾವುದೇ ಹಿಂಸಾಚಾರದಿಂದ ತೊಂದರೆಗೆ ಒಳಗಾದ, ದೌರ್ಜನ್ಯಕ್ಕೆ ಒಳಗಾಗುವ ಎಲ್ಲ ಸಮುದಾಯದ ಬಡ ಜನರಿಗೆ ಅದಾಲತ್‌ ಲೀಗ್‌ ಏಡ್‌ ಫೌಂಡೇಷನ್‌ ಮೂಲಕ ಉಚಿತ ಕಾನೂನು ನೆರವನ್ನು ನೀಡಲಾಗುವುದು’ ಎಂದು ಫೌಂಡೇಷನ್‌ನ ಅಧ್ಯಕ್ಷ
ಯು. ನಿಸಾರ್‌ ಅಹ್ಮದ್‌ ಭಾನುವಾರ ಇಲ್ಲಿ ತಿಳಿಸಿದರು. 

‘ಸಿಎಎ, ಎನ್‌ಆರ್‌ಸಿ ಮತ್ತಿತರ ವಿಷಯಗಳ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲಗಳಿವೆ. ನ್ಯಾಯಾಂಗದಲ್ಲಿನ ಪರಿಣಿತರು, ಹೈಕೋರ್ಟ್‌ ವಕೀಲರು ಈ ಕುರಿತು ಜನರಿಗೆ ಮಾಹಿತಿ ನೀಡಲಿದ್ದಾರೆ . ಜೆ.ಜೆ. ನಗರದಲ್ಲಿ ಮೊದಲ ಶಿಬಿರ ಆಯೋಜಿಸಲಾಗುವುದು’ ಎಂದರು. 

ನೆರವಿಗಾಗಿ, ಫೌಂಡೇಷನ್‌ನ ಕಾರ್ಯದರ್ಶಿ, ಹೈಕೋರ್ಟ್‌ ವಕೀಲ ಶಾಹುಲ್‌ ಹಮೀದ್‌ (99864–70671) ಸಂಪರ್ಕಿಸಬಹುದು ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)