‘ಸಮಾನತೆಯ ಲೈಂಗಿಕ ಹಕ್ಕು ಸಿಕ್ಕಿದೆ’

7
ಲೈಂಗಿಕ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಹೋರಾಟಗಾರ ವೆಂಕಟೇಶ್‌

‘ಸಮಾನತೆಯ ಲೈಂಗಿಕ ಹಕ್ಕು ಸಿಕ್ಕಿದೆ’

Published:
Updated:

ಬೆಂಗಳೂರು: ‘ಎಲ್‌ಜಿಬಿಟಿಕ್ಯು (ಲೆಸ್ಬಿಯನ್‌, ಗೇ, ಬೈಸೆಕ್ಸ್ಯುಯಲ್‌, ಟ್ರಾನ್ಸ್‌ಜೆಂಡರ್, ಕ್ವೀರ್‌) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ಐತಿಹಾಸಿಕ’ ಎಂದು ಲೈಂಗಿಕ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ‘ಸಂಗಮ’ ಸಂಸ್ಥೆಯ ಕಾನೂನು ಸಲಹೆಗಾರ ಬಿ.ಟಿ.ವೆಂಕಟೇಶ್‌ ಬಣ್ಣಿಸಿದ್ದಾರೆ.

ಈ ಕುರಿತಂತೆ ಗುರುವಾರ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಅವರು, ’ತೀರ್ಪಿನಿಂದ ಅಸ್ತಿತ್ವದಲ್ಲಿ ಇಲ್ಲದ ಸಮುದಾಯಕ್ಕೆ ಗೌರವದಿಂದ ಬದುಕಲು ಅವಕಾಶ ಸಿಕ್ಕಿದೆ. ಜನರಿಗೆ ಸಮಾನತೆಯ ಲೈಂಗಿಕ ಹಕ್ಕು ನೀಡಿದಂತಾಗಿದೆ. ಇಂತಹುದೊಂದು ದೊಡ್ಡ ಮಟ್ಟದ ಚಳವಳಿ ಬೆಂಗಳೂರಿನಲ್ಲಿ ಆರಂಭವಾಗಿದ್ದು ಹೆಮ್ಮೆಯ ವಿಷಯ’ ಎಂದು ಅವರು ಹೇಳಿದ್ದಾರೆ.

‘ಐಪಿಸಿ (ಭಾರತೀಯ ದಂಡ ಸಂಹಿತೆ) ಕಲಂ 377 ಕೇವಲ ಶ್ರೀಮಂತರ ಶೋಕಿ ಎನ್ನುವ ರೀತಿಯಲ್ಲಿ ಮಾತನಾಡುವ ಸಮಯದಲ್ಲಿ ಈ ದೇಶದ ಬಡವರು, ಶೂದ್ರ, ದಲಿತ, ಕ್ರಿಶ್ಚಿಯನ್‌, ಮುಸ್ಲಿಂ ಧರ್ಮೀಯರಲ್ಲಿ ಲೈಂಗಿಕ ವೃತ್ತಿಯನ್ನೇ ಅವಲಂಬಿಸಿದ್ದ ಸಮುದಾಯಕ್ಕೆ ಈ ತೀರ್ಪು ಹೆಮ್ಮೆಯಿಂದ ಬದುಕಲು ಅವಕಾಶ ಮಾಡಿಕೊಟ್ಟಿದೆ. ನಮ್ಮ 20 ವರ್ಷಗಳ ಹೋರಾಟಕ್ಕೆ ಜಯ ಸಿಕ್ಕಿದೆ’ ಎಂದು ವೆಂಕಟೇಶರ್ ಸಂತೋಷ ವ್ಯಕ್ತಪಡಿಸಿದ್ದಾರೆ.

ಎಲ್‌ಜಿಬಿಟಿ ಸಮುದಾಯಕ್ಕೆ ಇದೊಂದು ದೊಡ್ಡ ಜಯ ಎಂದು ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ್ದ ನಗರದ ‘ಸೆಂಟರ್ ಫಾರ್ ಲಾ ಅಂಡ್ ಪಾಲಿಸಿ ರೀಸರ್ಚ್’ ಮುಖ್ಯಸ್ಥೆ ಹಾಗೂ ವಕೀಲೆ ಜಯ್ನಾ ಕೊಠಾರಿ ಹರ್ಷ ವ್ಯಕ್ತಪಡಿಸಿದ್ದಾರೆ.

’ವಯಸ್ಕರ ನಡುವೆ ಸಮ್ಮತಿ ಇಲ್ಲದ ಲೈಂಗಿಕ ಕ್ರಿಯೆ ಮಾತ್ರ ಅಪರಾಧ ಎಂದು ನ್ಯಾಯಪೀಠ ಹೇಳಿದೆ. ಇದು ಗುಣಮಟ್ಟದ ಬದುಕು, ಘನತೆ ಖಾಸಗಿತನ ಎಲ್ಲರಿಗೂ ಇದೆ ಎಂಬುದರ ಅರ್ಥ. ಈ ತೀರ್ಪು ನಮಗೆ ಇನ್ನೂ ಹೆಚ್ಚಿನ ಹಕ್ಕುಗಳನ್ನು ಕೊಡಮಾಡುವಲ್ಲಿ ಮೊದಲ ಹೆಜ್ಜೆಯಾಗಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

**

ಸಂಬಂಧಪಟ್ಟ ಲೇಖನಗಳು

‘ಲಿಂಗತ್ವ ಅಲ್ಪಸಂಖ್ಯಾತರಿಗೆ ನೈಜ ಸ್ವಾತಂತ್ರ್ಯ’ 

ಸುಪ್ರೀಂ ಕೋರ್ಟ್‌: ಸಾಲುಗಟ್ಟಿವೆ ಮಹತ್ವದ ತೀರ್ಪುಗಳು

ಸಮ್ಮತಿಯ ಸಲಿಂಗಕಾಮ ಅಪರಾಧವಲ್ಲ

ಸಲಿಂಗಕಾಮ ಅಪರಾಧಮುಕ್ತ: ಅವಿತಿದ್ದ ಆಕಾಂಕ್ಷೆಗೆ ಮಳೆಬಿಲ್ಲಿನ ತೋರಣ

‘ನಿರಾಪರಾಧಿಯಾಗಲು ಒಂದೂವರೆ ಶತಮಾನ ಬೇಕಾಯಿತು’

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !