ಮರಾಠಿಯಲ್ಲಿ ಶಿವಕುಮಾರ ಶ್ರೀ ಜೀವನ ದರ್ಶನ

ಮಂಗಳವಾರ, ಏಪ್ರಿಲ್ 23, 2019
33 °C
ಮೇ 7ರಂದು ಸಮಗ್ರ ಚರಿತ್ರೆ ಬಿಡುಗಡೆ

ಮರಾಠಿಯಲ್ಲಿ ಶಿವಕುಮಾರ ಶ್ರೀ ಜೀವನ ದರ್ಶನ

Published:
Updated:
Prajavani

ತುಮಕೂರು: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಬದುಕು–ಸಾಧನೆ ಒಳಗೊಂಡ ‘ಸಿದ್ಧಗಂಗೆಚೆ ಸಿದ್ಧಯೋಗಿ, ಮಂದಿರಾ ಬಾಹೇರಿಲ್ ದೈವತಾಚಿಗೋಸ್ಟ್’ (ಸಿದ್ಧಗಂಗೆಯ ಸಿದ್ಧಯೋಗಿ, ದೇಗುಲದ ಹೊರಗಿರುವ ದೇವರ ಕಥೆ) ಸಮಗ್ರ ಚರಿತ್ರೆ ಪ್ರಥಮ ಬಾರಿಗೆ ಮರಾಠಿಯಲ್ಲಿ ಪ್ರಕಟಣೆಗೆ ಸಿದ್ಧಗೊಳ್ಳುತ್ತಿದೆ.

ಮಹಾರಾಷ್ಟ್ರದಲ್ಲಿಯೂ ಸ್ವಾಮೀಜಿ ಅವರ ಸಾಧನೆ ಪಸರಿಸುವುದು ಈ ಪ್ರಕಟಣೆಯ ಉದ್ದೇಶವಾಗಿದೆ. ಸೊಲ್ಲಾಪುರದ ಶರಣ ಸಾಹಿತ್ಯ ಅಧ್ಯಾಸನ್ ಸಂಸ್ಥೆಯು ಈ ಕಾರ್ಯ ಕೈಗೆತ್ತಿಕೊಂಡಿದೆ.

‘ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ವೇಳೆ ಸಂಸ್ಥೆಯಿಂದ ಅವರ ಸಾಧನೆ ಪರಿಚಯಿಸುವ ಲೇಖನ ಪ್ರಕಟಿಸಲಾಗಿತ್ತು. ಮುಸ್ಲಿಮರು, ದಲಿತರು ಸಹ ಸ್ವಾಮೀಜಿ ಕಾರ್ಯ ಮೆಚ್ಚಿ ಪತ್ರ ಬರೆದರು’ ಎನ್ನುವರು ಸಮಗ್ರ ಚರಿತ್ರೆಯ ಸಂಪಾದಕ ಚನ್ನವೀರ ಭದ್ರೇಶ್ವರಮಠ.

ಮರಾಠಿ ಓದುಗರಿಗೆ ಸ್ವಾಮೀಜಿ ಅವರ ಪರಿಚಯ ಇಲ್ಲ. ಇಲ್ಲಿನವರಿಗೂ ಅವರ ಕಾರ್ಯಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಕೆಲಸ ಕೈಗೊಂಡಿದ್ದೇವೆ. ಭಾಲ್ಕಿ ಹಿರೇಮಠದ ಬಸವಲಿಂಗ ಪಟ್ಟದ್ದೇವರು, ಅರವಿಂದ ಜತ್ತಿ, ನಾಗನೂರು ರುದ್ರಾಕ್ಷಿ ಮಠದ ಶ್ರೀಗಳು ಸೇರಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರದ 32 ಮಂದಿಯ ಲೇಖನಗಳು ಇರಲಿವೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !