ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ | ಅರಿಸಿನ ಬೆಳೆಗಾರರಿಗೂ ತಟ್ಟಿದ ಬಿಸಿ

Last Updated 26 ಏಪ್ರಿಲ್ 2020, 19:59 IST
ಅಕ್ಷರ ಗಾತ್ರ

ಚಿಂಚೋಳಿ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನಲ್ಲಿ ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಅರಿಸಿನ ಬೆಳೆಯಲಾಗಿದ್ದು, ಬಂಪರ್ ಇಳುವರಿ ಬಂದಿದೆ. ಆದರೆ, ಮಾರುಕಟ್ಟೆ ವ್ಯವಸ್ಥೆ ಇಲ್ಲದೆ, ದಲ್ಲಾಳಿಗಳನ್ನು ಅವಲಂಬಿಸಿ ರೈತರು ನಷ್ಟ ಅನುಭವಿಸುತ್ತಿದ್ದಾರೆ.

ಚಿಂಚೋಳಿ, ಚಂದ್ರಂಪಳ್ಳಿ, ಐನೋಳ್ಳಿ, ದೇಗಲಮಡಿ, ಪಟಪಳ್ಳಿ ಕಡೆ ಅರಿಸಿನ ಬೆಳೆ ಇದೆ. ‘ಬಾಗಲಕೋಟೆಯಲ್ಲದೆ, ಮಹಾರಾಷ್ಟ್ರ, ತೆಲಂಗಾಣಕ್ಕೂ ಹೋಗಿ ಮಾರುತ್ತಿದ್ದೆವು. ಈಗ ಸಾಧ್ಯವಾಗುತ್ತಿಲ್ಲ’ ಎಂದು ಬೆಳೆಗಾರ ನರೇಂದ್ರ ಬಿ.ಎನ್.ಪಾಟೀಲ ಹೇಳಿದರು.

‘ಬಹುತೇಕ ರೈತರು ಅರಿಸಿನವನ್ನು ಕುದಿಸಿ ಒಣಗಿಸುವ (ಸಂಸ್ಕರಿಸುವ) ಕೆಲಸದಲ್ಲಿ ತೊಡಗಿದ್ದಾರೆ. ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವಂತೆ ಮುಖ್ಯಮಂತ್ರಿ ಅವರನ್ನು ಕೋರುತ್ತೇನೆ’ ಎಂದು ಶಾಸಕ ಡಾ.ಅವಿನಾಶ ಜಾಧವ ತಿಳಿಸಿದ್ದಾರೆ.

ಶಾಸಕ ಸುಭಾಷ ರಾಠೋಡ ಅವರೂ, ‘ಬೆಂಬಲ ಬೆಲೆ ಯೋಜನೆಯಡಿ ಎಪಿಎಂಸಿ ಮೂಲಕ ಖರೀದಿಸಲು ಸರ್ಕಾರ ಮುಂದಾಗಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT