ಶನಿವಾರ, ಜೂನ್ 6, 2020
27 °C

‘ಪ್ರಜಾವಾಣಿ’ ವರದಿ ಫಲಶ್ರುತಿ: ಅರ್ಹರಿಗೆ ನೇರ ಹಾಲು ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ಲಾಕ್‌ಡೌನ್‌ ಅವಧಿ ಕೊನೆಗೊಳ್ಳುವವರೆಗೆ ನಗರದ ಎಲ್ಲಾ ಕೊಳೆಗೇರಿ ನಿವಾಸಿಗಳು, ಬಡ ಕೂಲಿ ಕಾರ್ಮಿಕರಿಗೆ ನಗರಸಭೆ ಸಿಬ್ಬಂದಿ ನೇರವಾಗಿ ಹಾಲು ತಲುಪಿಸುವ ವ್ಯವಸ್ಥೆ ಬುಧವಾರ ಆರಂಭಿಸಿದೆ.

‘ಉಚಿತ ಹಾಲಿನಲ್ಲೂ ರಾಜಕೀಯ ವಾಸನೆ’ ಶೀರ್ಷಿಕೆ ಅಡಿ ಬುಧವಾರ (ಏ.8) ‘ಪ್ರಜಾವಾಣಿ’ ವಿಶೇಷ ವರದಿ ಪ್ರಕಟಿಸಿತ್ತು. ವರದಿಗೆ ಎಚ್ಚೆತ್ತುಕೊಂಡಿರುವ ನಗರಸಭೆ ಅರ್ಹರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಂಡಿದೆ.

‘ಕೆಲವರ ಹಸ್ತಕ್ಷೇಪದಿಂದ ಕಡು ಬಡವರಿಗೆ ಹಾಲು ಸಿಗುತ್ತಿರಲಿಲ್ಲ. ವಿವಿಧ ಇಲಾಖೆಗಳ ಸಿಬ್ಬಂದಿಯ ನೆರವಿನೊಂದಿಗೆ ಬುಧವಾರದಿಂದ ನೇರವಾಗಿ ಅರ್ಹರನ್ನು ಗುರುತಿಸಿ ಹಾಲು ವಿತರಿಸಲಾಗುತ್ತಿದೆ. ಲಾಕ್‌ಡೌನ್‌ ಮುಗಿಯುವವರೆಗೆ ನಮ್ಮ ಸಿಬ್ಬಂದಿಯೇ ವಿತರಿಸುವರು’ ಎಂದು ನಗರಸಭೆ ಪೌರಾಯುಕ್ತೆ ಪಿ. ಜಯಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು