48ರ ಗಡಿಯಲ್ಲಿಯೇ ಮುಗ್ಗರಿಸಿದ ಎಂಇಎಸ್‌!

ಶನಿವಾರ, ಏಪ್ರಿಲ್ 20, 2019
28 °C
101 ಅಭ್ಯರ್ಥಿಗಳ ಘೋಷಣೆ ಮಾಡಿದ್ದ ಎಂಇಎಸ್‌;

48ರ ಗಡಿಯಲ್ಲಿಯೇ ಮುಗ್ಗರಿಸಿದ ಎಂಇಎಸ್‌!

Published:
Updated:

ಬೆಳಗಾವಿ: ಕರ್ನಾಟಕ– ಮಹಾರಾಷ್ಟ್ರ ಗಡಿ ವಿವಾದದ ಬಗ್ಗೆ ದೇಶದ ಗಮನ ಸೆಳೆಯುವ ಸಲುವಾಗಿ ಈ ಸಲ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ 101 ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿಕೆ ನೀಡಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿಯ (ಎಂಇಎಸ್‌) ಮುಖಂಡರಿಗೆ 48 ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಲು ಸಾಧ್ಯವಾಗಿದೆ.

‘101 ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರವನ್ನು ಕೊನೆಯ ಕ್ಷಣದಲ್ಲಿ ತೆಗೆದುಕೊಂಡಿದ್ದೇವು. ಪ್ರಚಾರಕ್ಕೆ ಸಮಯಾವಕಾಶ ಸಾಕಾಗಲಿಲ್ಲ. ಹೀಗಾಗಿ ನಾವು ಅಂದುಕೊಂಡಷ್ಟು ಅಭ್ಯರ್ಥಿಗಳನ್ನು ಇಳಿಸಲು ಸಾಧ್ಯವಾಗಲಿಲ್ಲ’ ಎಂದು ಎಂಇಎಸ್‌ ಮುಖಂಡ ವಿಕಾಸ ಕಲಘಟಗಿ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 3

  Happy
 • 2

  Amused
 • 0

  Sad
 • 2

  Frustrated
 • 12

  Angry

Comments:

0 comments

Write the first review for this !