ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿಸಂ ಮಾಡಕ್ಕೆ ಬಂದಿದ್ದೀಯಾ ಪಿಎಸ್‌ಐಗೆ ಶಾಸಕರ ತರಾಟೆ

ಜೆಡಿಎಸ್ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ; ಇನ್‌ಸ್ಪೆಕ್ಟರ್ ತರಾಟೆಗೆ ತೆಗೆದುಕೊಂಡ ಶಾಸಕ
Last Updated 14 ಜೂನ್ 2020, 19:31 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ಗ್ರಾಮಾಂ ತರ ಶಾಸಕ ಡಿ.ಸಿ.ಗೌರಿಶಂಕರ್, ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್ ಲಕ್ಷ್ಮಯ್ಯ
ಅವರನ್ನು ಏಕವಚನದಲ್ಲಿ ತರಾಟೆಗೆ ತೆಗೆದುಕೊಂಡಿರುವ ಕುರಿತ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹೊನ್ನೇನಹಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿತ್ತು. ನಾಲ್ಕು ಮಂದಿ ಜೆಡಿಎಸ್‌ ಕಾರ್ಯಕರ್ತರಿಗೆ ಗಂಭೀರ ಗಾಯವಾಗಿತ್ತು. ಶಾಸಕರು ಶನಿವಾರ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಬಂದಿದ್ದರು. ಆಗ, ಕುಟುಂಬಸ್ಥರು, ಸ್ಥಳೀಯರು ಸಬ್‌ ಇನ್‌ಸ್ಪೆಕ್ಟರ್ ವಿರುದ್ಧ ದೂರಿನ ಸುರಿಮಳೆಗೈದರು. ದೂರು ನೀಡಲು ಹೋದರೆ ಪ್ರಕರಣ ದಾಖಲಿಸಿಕೊಳ್ಳದೇ ಅಸಭ್ಯವಾಗಿ ನಡೆದುಕೊಳ್ಳುವರು ಎಂದುದೂರಿದರು. ಇದರಿಂದ ಕೆರಳಿದ ಗೌರಿಶಂಕರ್, ಸ್ಥಳದಲ್ಲಿದ್ದ ಸಬ್‌ ಇನ್‌ಸ್ಪೆಕ್ಟರ್‌ ಅವರನ್ನು ಕರೆದು, ‘ಏಯ್‌ ನೀನೇನು ಇನ್‌ಸ್ಪೆಕ್ಟರ್ ಕೆಲಸ ಮಾಡುವುದಕ್ಕೆ ಬಂದಿದ್ದೀಯಾ, ಇಲ್ಲ ರೌಡಿಸಂ ಮಾಡಕ್ಕೆ
ಬಂದಿದ್ದೀಯಾ. ನಿನಗೆ ಮರ್ಯಾದೆ ಇಲ್ಲವ. ನೀನು ಪೊಲೀಸ್ ಇಲಾಖೆಯನ್ನು ರೌಡಿಸಂ ಇಲಾಖೆ ಅನ್ಕೊಂಡಿದ್ದಿಯ. ಅನ್ನ ತಿಂತಿಯಾ ಏನ್ ತಿಂತಿಯಾ’ ಎಂದು ಸಿಡಿಮಿಡಿಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT