‘ಇಳಿಯಿರಿ,ಇಳಿಯಿರಿ..ನಾ ಮತ್ತೊಮ್ಮೆ ಬರುವೆ’ ಮರ ಏರಿದ್ದ ಅಭಿಮಾನಿಗಳಿಗೆ ಮೋದಿ ಮನವಿ

ಶನಿವಾರ, ಏಪ್ರಿಲ್ 20, 2019
27 °C
ಮಂಗಳೂರಿನಲ್ಲಿ ಪ್ರಧಾನಿ

‘ಇಳಿಯಿರಿ,ಇಳಿಯಿರಿ..ನಾ ಮತ್ತೊಮ್ಮೆ ಬರುವೆ’ ಮರ ಏರಿದ್ದ ಅಭಿಮಾನಿಗಳಿಗೆ ಮೋದಿ ಮನವಿ

Published:
Updated:

ಮಂಗಳೂರು: ಪ್ರಧಾನಿ ಮೋದಿ ಅವರನ್ನು ಕಾಣಲು, ಅವರ ಭಾಷಣ ಕೇಳಲು ಮರವೇರಿ ಕುಳಿತಿದ್ದ ಜನರತ್ತ ಕೈಬೀಸಿದ ಮೋದಿ, ಕೂಡಲೇ ಅಲ್ಲಿಂದ ಕೆಳಗಿಳಿಯುವಂತೆ ವೇದಿಕೆಯಿಂದಲೇ ಮನವಿ ಮಾಡಿದರು.

ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಅಪಾರ ಸಂಖ್ಯೆಯಲ್ಲಿ ಜನರು ಬಂದಿದ್ದರಿಂದ ನೆಹರೂ ಮೈದಾನ ಪ್ರವೇಶಿಸಲು ಹರಸಾಹಸ ಪಟ್ಟರು. ಸ್ಥಳಾವಕಾಶ ಸಿಗದೆ ಅನೇಕರು ಮೈದಾನದ ಪಕ್ಕದ ಮರವನ್ನು ಏರಿದ್ದರು. ಮರದ ಮೇಲಿಂದಲೇ ಕೈಬೀಸುತ್ತಿದ್ದವರನ್ನು ಗಮನಿಸಿದ ಪ್ರಧಾನಿ ಮೋದಿ, ’ಅಪಾಯವನ್ನು ತಂದುಕೊಳ್ಳುವಂತಹ ಈ ರೀತಿಯ ಪ್ರಯತ್ನ ಬೇಡ. ಕೂಡಲೇ ಮರದಿಂದ ಕೆಳಗೆ ಇಳಿಯಿರಿ’ ಎಂದು ವಿನಂತಿಸಿದರು.

‘ಈ ರೀತಿ ತೊಂದರೆ ತೆಗೆದುಕೊಳ್ಳಬೇಡಿ. ನಾನು ನಿಮ್ಮವ, ಮತ್ತೆ ಇಲ್ಲಿಗೆ ಬರುವೆ, ಮತ್ತೆ ಭೇಟಿ ಮಾಡೋಣ...ಕೆಳಗೆ ಇಳಿಯಿರಿ...’ ಎನ್ನುತ್ತಿದ್ದಂತೆ ಜನರ ಉದ್ಗಾರ ಜೋರಾಯಿತು.

ಕ್ರೀಡಾಂಗಣದಲ್ಲಿ ಪ್ರವೇಶಕ್ಕೆ ಅಳವಡಿಸಲಾಗಿರುವ ಗೇಟ್‌ಗಳ ಸಂಖ್ಯೆ ಕಡಿಮೆಯಾಗಿದ್ದು, ಜನರ ಸಂಖ್ಯೆ ಹೆಚ್ಚಾಗಿತ್ತಿ. ಹೀಗಾಗಿ ನೂಕುನುಗ್ಗಲು ಉಂಟಾಗಿತ್ತು. ಜನರನ್ನು ನಿಯಂತ್ರಿಸಲು ಪೊಲೀಸರು ಸಾಕಷ್ಟು ಪ್ರಯಾಸ ಪಡುವಂತಾಯಿತು.

ಇದನ್ನೂ ಓದಿ: ಅವರದು ವಂಶೋದಯ, ನಮ್ಮದು ಅಂತ್ಯೋದಯ’– ಮಂಗಳೂರಿನಲ್ಲಿ ಪ್ರಧಾನಿ ಮೋದಿ

ನೂಕುನುಗ್ಗಲು ಉಂಟಾಗಿದ್ದರಿಂದ ಬಹಳಷ್ಟು ಜನರು ಮನೆಗೆ ಹಿಂದಿರುಗಿದರು.

ಹೆಚ್ಚು ವಿವಿಐಪಿ ಪಾಸ್‌ಗಳನ್ನು ವಿತರಿಸಲಾಗಿತ್ತು, ಆದರೆ ಗೇಟ್‌ಗಳ ನಿರ್ವಹಣೆ ಸರಿಯಾಗಿ ಆಗದೇ ಇರುವುದರಿಂದ ಜನರು ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 36

  Happy
 • 0

  Amused
 • 2

  Sad
 • 1

  Frustrated
 • 6

  Angry

Comments:

0 comments

Write the first review for this !