ಕಲಬುರ್ಗಿ: ತಾಲ್ಲೂಕಿನ ಹಡಗಿಲ ಹಾರುತಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಗುರುವಾರ ಬೆಳಗಿನ ಜಾವ ಮನೆಯೊಂದಕ್ಕೆ ನುಗ್ಗಿದೆ.

ಶ್ರೀಮಂತ ಎಂಬುವವರಿಗೆ ಈ ಮನೆ ಸೇರಿದ್ದು, ಮನೆಯಲ್ಲಿದ್ದವರೆಲ್ಲರೂ ಮಲಗಿದ್ದ ವೇಳೆ ಏಕಾಏಕಿ ಬಸ್ ನುಗ್ಗಿದೆ. ಆದರೆ ಬಸ್ ನುಗ್ಗಿದ ಸ್ಥಳದಲ್ಲಿ ಯಾರೂ ಮಲಗಿರಲಿಲ್ಲ. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಬಸ್ನಲ್ಲಿದ್ದ 18 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎನ್ಇಕೆಆರ್ಟಿಸಿಗೆ ಸೇರಿದ ಕೆಎ 28 ಎಫ್ 2196 ಸಂಖ್ಯೆಯ ಬಸ್ ಖಾಸಗಿ ಒಪ್ಪಂದದ ಮೇರೆಗೆ ವಿಜಯಪುರ ಜಿಲ್ಲೆಯ ಸಿಂದಗಿಯಿಂದ ಬೀದರ್ಗೆ ತೆರಳುತ್ತಿತ್ತು.

ಬಸ್ ಚಾಲಕ ಶಿವಪ್ಪ ಕುಂಬಾರ ಅವರಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಫರತಾಬಾದ್ ಪಿಎಸ್ಐ ಸುರೇಶ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.