ಸೋಮವಾರ, ಆಗಸ್ಟ್ 8, 2022
22 °C

ಜೆಡಿಎಸ್‌ ಸಖ್ಯದಿಂದಲೇ ಲೋಕಸಭೆ ಸೋಲು: ಮುಂದೆ ಯಾವ ಮೈತ್ರಿಯೂ ಇಲ್ಲ ಎಂದ ದಿನೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡಿಕೊಂಡಿದ್ದರಿಂದಲೇ ಲೋಕಸಭಾ ಚುನಾವಣೆ ಯಲ್ಲಿ ಪಕ್ಷಕ್ಕೆ ಸೋಲು ಉಂಟಾಯಿತು. ಇನ್ನು ಮುಂದೆ ಅಂತಹ ಯಾವ ಮೈತ್ರಿಯೂ ಇಲ್ಲದೆ ಪಕ್ಷವು ಒಗ್ಗಟ್ಟಿನಿಂದ ಮುನ್ನಡೆಯಲಿದೆ ಎಂದು ಕೆಪಿಸಿಸಿ ನಿರ್ಗಮಿತ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಮಾಜಿ ಸಚಿವ ಡಿ.ಕೆ ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವ ಸಮಾರಂಭದಲ್ಲಿ ಮಾತನಾಡಿದ ದಿನೇಶ್‌ ಗುಂಡೂರಾವ್‌, ಪಕ್ಷವು ಇಂದು ಒಗ್ಗಟ್ಟಿನಿಂದಿದೆ. ಎಲ್ಲ ನಾಯಕರೂ ಇಲ್ಲಿ ಒಂದುಗೂಡಿದ್ದೇವೆ. ಪಕ್ಷವನ್ನು ಒಗ್ಗಟ್ಟಿನಿಂದ  ಮುಂದೆ  ಸಾಗಿಸುವ ಸಾಮರ್ಥ್ಯವನ್ನು ಡಿ.ಕೆ.ಶಿವಕುಮಾರ್ ಹೊಂದಿರುವ ಕಾರಣ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ನಿಶ್ಚಿತ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು