ಭಾನುವಾರ, ಆಗಸ್ಟ್ 1, 2021
26 °C

ದೆಹಲಿ ಪಬ್ಲಿಕ್ ಸ್ಕೂಲ್‌ನಿಂದ ಮಾಸ್ಕ್ ಮಾರಾಟ; ಫೋಟೊ ವೈರಲ್‌, ಶಾಲೆ ಸ್ಪಷ್ಟನೆ

ರಶ್ಮಿ ಬೇಲೂರು Updated:

ಅಕ್ಷರ ಗಾತ್ರ : | |

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಡಿಪಿಎಸ್‌ ಶಾಲೆಯ ಮಾಸ್ಕ್

ಬೆಂಗಳೂರು: ಬೆಂಗಳೂರಿನ ದೆಹಲಿ ಪಬ್ಲಿಕ್ ಸ್ಕೂಲ್ (ಡಿಪಿಎಸ್) ವಿದ್ಯಾರ್ಥಿಗಳಿಗೆ ಶಾಲೆಯಿಂದ ಯಾವುದೇ ಮಾಸ್ಕ್‌ಗಳನ್ನು ನೀಡಿಲ್ಲ ಎಂದು ಎಲ್ಲ ಪೋಷಕರಿಗೆ ಶಾಲಾ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.

ಡಿಪಿಎಸ್‌ ಶಾಲೆಯ ಹೆಸರು ಮತ್ತು ಲೋಗೊ ಮುದ್ರಿತ ಮಾಸ್ಕ್‌ನ ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಶಾಲೆಯು ಸ್ಪಷ್ಟನೆ ನೀಡಿದೆ. ಆ ಮಾಸ್ಕ್‌ಗಳಿಗೆ ಶಾಲೆಯು ₹400 ದರ ನಿಗದಿ ಮಾಡಿತ್ತು ಎನ್ನುವ ಆರೋಪಗಳು ಕೇಳಿ ಬಂದಿದ್ದವು.

ಶಾಲೆಯ ಮಂಡಳಿ ಸದಸ್ಯ ಮನ್ಸೂರ್ ಅಲಿ ಖಾನ್ ಮಾತನಾಡಿ, ಡಿಪಿಎಸ್ ಶಾಲೆಯು ವಿದ್ಯಾರ್ಥಿಗಳಿಗೆ ಮಾಸ್ಕ್ ನೀಡುವ ಕುರಿತಾದ ಯಾವುದೇ ಚುಟುವಟಿಕೆಯಲ್ಲಿ ಪಾಲ್ಗೊಂಡಿಲ್ಲ ಎಂದು ಎಲ್ಲ ಪೋಷಕರಿಗೂ ತಿಳಿಸಿದೆ ಎಂದಿದ್ದಾರೆ.

ಕೆಲವು ಏಜೆನ್ಸಿಗಳು ಶಾಲೆಯ ಹೆಸರು ಮತ್ತು ಲೋಗೊವನ್ನು ಬಳಸಿಕೊಂಡು ಶಾಲಾ ಮಕ್ಕಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಮುಖಗವಸು ಮತ್ತು ಸ್ಯಾನಿಟೈಜರ್‌ಗಳಂತಹ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಶಾಲೆಯು ಅಂತಹ ಮಾರಾಟಗಾರರೊಂದಿಗೆ ಸಂಬಂಧ ಹೊಂದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿನ ಅವಕಾಶವನ್ನು ದುರುಪಯೋಗ ಪಡಿಸಿಕೊಳ್ಳುವ ಈ ಸಮಾಜ ವಿರೋಧಿಗಳಿಗೆ ಬಲಿಯಾಗದಿರಿ ಎಂದು ಹೇಳಿದ್ದಾರೆ.

ಶಾಲೆ ನೀಡಿರುವ ಸ್ಪಷ್ಟೀಕರಣದ ಹೊರತಾಗಿಯೂ, ನಕಲಿ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುತ್ತಿವೆ ಮತ್ತು ಹಲವಾರು ಪೋಷಕರು 'ಶಾಲೆ ಈಗ ಮುಖಗವಸುಗಳು ಮತ್ತು ಸ್ಯಾನಿಟೈಜರ್‌ಗಳ ಹೆಸರಿನಲ್ಲಿ ದರೋಡೆ ಮಾಡಲು ಪ್ರಾರಂಭಿಸಿದೆ' ಎಂದು ನಿಂದಿಸುವಂತಹ ಸಂದೇಶಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು