ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ 25 ಸಾವಿರ ದಾಟಿದ ಸೋಂಕಿತರ ಸಂಖ್ಯೆ, ಕೋವಿಡ್‌ನಿಂದ ಮೃತಪಟ್ಟವರು 401

Last Updated 6 ಜುಲೈ 2020, 20:23 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಬೆಂಗಳೂರು ನಗರದಲ್ಲಿ 981 ಪ್ರಕರಣಗಳು ಸೇರಿದಂತೆ ರಾಜ್ಯದಲ್ಲಿ ಮತ್ತೆ 1,843 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 25,317ಕ್ಕೆ ತಲುಪಿದೆ.

ಕೋವಿಡ್‌ನಿಂದ 30 ಮಂದಿ ಮೃತಪಟ್ಟಿರುವುದು ಸೋಮವಾರ ಒಂದೇ ದಿನ ಖಚಿತಪಟ್ಟಿದ್ದು, ಸಾವಿನ ಒಟ್ಟು ಸಂಖ್ಯೆ 401ಕ್ಕೆ ಮುಟ್ಟಿದೆ.

ಐಸಿಯುಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 279ಕ್ಕೆ ಹೆಚ್ಚಿದೆ. ಸೋಮವಾರ 680 ಮಂದಿ ಗುಣಮುಖರಾಗುವ ಮೂಲಕ
ಈವರೆಗೆ ಒಟ್ಟು 10,527 ಮಂದಿ ಮನೆಗೆ ತೆರಳಿದ್ದಾರೆ. 14,385 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೋವಿಡ್‌ನಿಂದ ಬೆಂಗಳೂರಿನಲ್ಲಿ 10 ಮಂದಿ ಮೃತಪಟ್ಟರೆ, ಬೀದರ್‌ನಲ್ಲಿ 8, ಮೈಸೂರಿನಲ್ಲಿ 3, ದಕ್ಷಿಣ ಕನ್ನಡದಲ್ಲಿ 2 ಹಾಗೂ ಬಳ್ಳಾರಿ, ಹಾಸನ, ಕೊಡಗು, ದಾವಣಗೆರೆ, ಬಾಗಲಕೋಟೆ, ತುಮಕೂರು, ಚಿಕ್ಕಬಳ್ಳಾಪುರಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ಬೆಂಗಳೂರು ನಗರದಲ್ಲಿ ಗುಣಮುಖರಾಗುವವರ ಪ್ರಮಾಣದಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದ್ದು, 278 ಮಂದಿ ಮನೆಗೆ ತೆರಳಿದರು. ಭಾನುವಾರಕ್ಕೆ ಹೋಲಿಸಿದರೆ ಹೊಸದಾಗಿ ಸೋಂಕಿತರ ಪ್ರಮಾಣ ಕಡಿಮೆಯಾಗಿದ್ದು, ಸೋಮವಾರ ಈ ಸಂಖ್ಯೆ 244 ಆಗಿತ್ತು. ಎರಡು ದಿನಗಳಿಂದ ಏರುಗತಿಯ ಪ್ರಮಾಣ ಕಂಡಿದ್ದ ದಕ್ಷಿಣ ಕನ್ನಡದಲ್ಲಿ (34) ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದರೆ, ಬಳ್ಳಾರಿಯಲ್ಲಿ 99, ಉತ್ತರ ಕನ್ನಡದಲ್ಲಿ 81, ಬೆಂಗಳೂರು ಗ್ರಾಮಾಂತರದಲ್ಲಿ 68, ಧಾರವಾಡದಲ್ಲಿ 56 ಹಾಗೂ ಕಲಬುರ್ಗಿಯಲ್ಲಿ 53 ಹೊಸ ಪ್ರಕರಣಗಳು ದಾಖಲಾಗಿವೆ.

ಹಾಸನದಲ್ಲಿ 49, ಮೈಸೂರಿನಲ್ಲಿ 45, ಬೀದರ್‌ನಲ್ಲಿ 44, ಉಡುಪಿಯಲ್ಲಿ 40, ಮಂಡ್ಯದಲ್ಲಿ 39, ವಿಜಯಪುರದಲ್ಲಿ 36, ಯಾದಗಿರಿಯಲ್ಲಿ 35, ಬಾಗಲಕೋಟೆಯಲ್ಲಿ 33, ತುಮಕೂರಿನಲ್ಲಿ 31, ಶಿವಮೊಗ್ಗದಲ್ಲಿ 24, ಗದಗದಲ್ಲಿ 18, ಚಾಮರಾಜನಗರದಲ್ಲಿ 12, ರಾಮನಗರದಲ್ಲಿ 11, ಕೋಲಾರದಲ್ಲಿ 10, ಹಾವೇರಿ ಮತ್ತು ಕೊಪ್ಪಳದಲ್ಲಿ ತಲಾ 9, ಚಿಕ್ಕಬಳ್ಳಾಪುರದಲ್ಲಿ 7, ರಾಯಚೂರು ಮತ್ತು ಚಿತ್ರದುರ್ಗ
ದಲ್ಲಿ ತಲಾ 6, ದಾವಣಗೆರೆಯಲ್ಲಿ3, ಚಿಕ್ಕಮಗಳೂರು, ಕೊಡಗಿನಲ್ಲಿ ತಲಾ 2 ಪ್ರಕರಣಗಳು ದೃಢಪಟ್ಟಿವೆ.

ದುಬಾರಿ ಶುಲ್ಕ: ಅಪೊಲೊಗೆ ನೋಟಿಸ್‌

ಬೆಂಗಳೂರು: ಕೋವಿಡ್‌ ಪರೀಕ್ಷೆಗೆ ರೋಗಿಯೊಬ್ಬರಿಂದ ₹ 4,500ಕ್ಕಿಂತ ಅಧಿಕ ಶುಲ್ಕ ಪಡೆಯುವಂತಿಲ್ಲ ಎಂಬ ನಿಯಮ ಉಲ್ಲಂಘಿಸಿ, ₹ 6 ಸಾವಿರ ಪಡೆದ ಶೇಷಾದ್ರಿಪುರದ ಅಪೊಲೊ ಆಸ್ಪತ್ರೆಗೆ ರಾಷ್ಟ್ರೀಯ ಆರೋಗ್ಯ ಮಿಷನ್‌ನ‌ (ಎನ್‌ಎಚ್‌ಎಂ) ಕರ್ನಾಟಕದ ಯೋಜನಾ ನಿರ್ದೇಶಕರು ಸೋಮವಾರ ನೋಟಿಸ್ ಜಾರಿ ಮಾಡಿದ್ದಾರೆ.

‘ಇದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ನ (ಐಸಿಎಂಆರ್‌) ಮಾರ್ಗಸೂಚಿಯ ಸ್ಪಷ್ಟ ಉಲ್ಲಂಘನೆ. ಹೆಚ್ಚಿನ ಶುಲ್ಕ ಪಡೆದಿರುವುದಕ್ಕೆ ಎರಡು ದಿನದೊಳಗೆ ವಿವರಣೆ ನೀಡಬೇಕು, ತಪ್ಪಿದಲ್ಲಿ ನಿಯಮಗಳಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT