ಗುರುವಾರ , ಆಗಸ್ಟ್ 5, 2021
21 °C

ವೇತನ ರಹಿತ ರಜೆ ಪ್ರಸ್ತಾವಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನೌಕರರಿಗೆ ಒಂದು ವರ್ಷದ ಅವಧಿಗೆ ವೇತನರಹಿತ ರಜೆ ಮಂಜೂರು ಮಾಡುವ ಪ್ರಸ್ತಾವನೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಷನ್ ವಿರೋಧ ವ್ಯಕ್ತಪಡಿಸಿದೆ.

‘ನೌಕರರು ಆರ್ಥಿಕವಾಗಿ ಈಗಲೇ ಸಂಕಷ್ಟದಲ್ಲಿದ್ದಾರೆ. ವರ್ಷಗಟ್ಟಲೆ ವೇತನ ಇಲ್ಲದ ಪರಿಸ್ಥಿತಿ ನಿರ್ಮಿಸಿದರೆ ಅವರ ಕುಟುಂಬಗಳನ್ನು ಬೀದಿಗೆ ತಳ್ಳಿದಂತೆ ಆಗಲಿದೆ’ ಎಂದು ಫೆಡರೇಷನ್ ಅಧ್ಯಕ್ಷ ಎಚ್‌.ಡಿ. ರೇವಪ್ಪ ಹೇಳಿದ್ದಾರೆ.

‘ಕೆಲವೇ ಬಸ್‌ ಮತ್ತು ಡಿಪೊಗಳಿಂದ ಆರಂಭವಾದ ನಿಗಮವು ಈಗ ದೇಶದಲ್ಲೇ ದೊಡ್ಡ ಸಂಸ್ಥೆಯಾಗಿ ಬೆಳೆಯಲು ಕಾರ್ಮಿಕರು ಹಗಲು–ರಾತ್ರಿ ಶ್ರಮ ವಹಿಸಿದ್ದೇ ಕಾರಣ. ಅವರನ್ನು ಸಂಕಷ್ಟಕ್ಕೆ ದೂಡಬಾರದು’ ಎಂದು ಒತ್ತಾಯಿಸಿದ್ದಾರೆ.

‘ಕೋವಿಡ್ ಮತ್ತು ರಾಜ್ಯ ಸರ್ಕಾರದ ನೀತಿಗಳಿಂದಾಗಿ ಸಂಸ್ಥೆಗಳು ಈಗ ನಷ್ಟದಲ್ಲಿವೆ. ಈ ಸಂದರ್ಭದಲ್ಲಿ ನಿಗಮಗಳ ಪುನಶ್ಚೇತನಕ್ಕೆ ಪ್ಯಾಕೇಜ್ ಘೋಷಿಸಬೇಕು. ವಿದ್ಯಾರ್ಥಿ ಪಾಸ್ ಹಾಗೂ ಇನ್ನಿತರೆ ರಿಯಾಯಿತಿ ರೂಪದಲ್ಲಿ ಸರ್ಕಾರದಿಂದ ಬರಬೇಕಿರುವ ಸುಮಾರು ₹2 ಸಾವಿರ ಕೋಟಿಯಷ್ಟು ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು