ಹುಬ್ಬಳ್ಳಿ/ಧಾರವಾಡ: ಪಾಕಿಸ್ತಾನದ ಪರ ಘೋಷಣೆ ಕೂಗಿ ಜೈಲು ಪಾಲಾಗಿರುವ ಕೆಎಲ್ಇ ತಾಂತ್ರಿಕ ಕಾಲೇಜಿನ ಮೂವರು ಕಾಶ್ಮೀರಿ ವಿದ್ಯಾರ್ಥಿಗಳ ಪರ ಜಾಮೀನು ಅರ್ಜಿ ಸಲ್ಲಿಸಲು ಧಾರವಾಡದ ಜಿಲ್ಲಾ ನ್ಯಾಯಾಲಯಕ್ಕೆ ಬಂದಿದ್ದ ಬೆಂಗಳೂರಿನ ಮೂವರು ವಕೀಲರು ಸ್ಥಳೀಯ ವಕೀಲರ ತೀವ್ರ ವಿರೋಧ, ಪ್ರತಿಭಟನೆ ಎದುರಿಸಿ, ಅರ್ಜಿ ಸಲ್ಲಿಸಲಾಗದೆ ವಾಪಸ್ಸಾದರು.

ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ನ್ಯಾಯಾಲಯಕ್ಕೆ ಬಂದ ಬೆಂಗಳೂರಿನ ವಕೀಲರಾದ ನರೇಂದ್ರ ತಂಡದ ಮೈತ್ರಿ ಕೃಷ್ಣನ್ ಮತ್ತು ನಿಯಾಜ್ ಹಾಗೂ ರಾಜೇಶ್ ಅವರು ನ್ಯಾಯಾಲಯ ಪ್ರವೇಶಿಸದಂತೆ ತಡೆಯಲು ಸ್ಥಳೀಯ ವಕೀಲರು ಪ್ರಯತ್ನಿಸಿದರು.

‘ನ್ಯಾಯಾಲಯ ಪ್ರವೇಶಿಸದಂತೆ ನಮ್ಮನ್ನು ತಡೆಯಲು ನಿಮಗೆ ಅಧಿಕಾರ ಇಲ್ಲ’ ಎಂದು ಕೆಲ ವಕೀಲರು ಪೊಲೀಸರನ್ನು ಪ್ರಶ್ನಿಸಿದರು. ‘ಹೈಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ಭದ್ರತೆ ಒದಗಿಸಲಾಗಿದೆ’ ಎಂಬ ಪೊಲೀಸರ ಉತ್ತರಕ್ಕೆ ಆದೇಶದ ಪ್ರತಿ ಕೊಡಿ’ ಎಂದು ವಕೀಲರು ಕೇಳಿದರು.

ನಿಯಮಾನುಸಾರ ಸಲ್ಲಿಕೆಯಾಗದ ಅರ್ಜಿ: ಆರೋಪಿಗಳ ಪರ ವಕೀಲರು ಜಾಮೀನು ಅರ್ಜಿಯನ್ನು ನೇರವಾಗಿ ನ್ಯಾಯಾಲಯಕ್ಕೆ ಸಲ್ಲಿಸಿದರು. ಇದಕ್ಕೆ ಹಲವು ವಕೀಲರು ಆಕ್ಷೇಪ ವ್ಯಕ್ತಪಡಿಸಿ, ‘ಅರ್ಜಿಯನ್ನು ನಿಯಮಾನುಸಾರ ಸಲ್ಲಿಸಿಲ್ಲ. ನ್ಯಾಯಾಲಯದ ಆಡಳಿತಾಧಿಕಾರಿ ಬಳಿ ಅರ್ಜಿ ದಾಖಲಿಸಬೇಕು. ನೇರ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬಾರದು’ ಎಂದು ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾ ನ್ಯಾಯಾಧೀಶ ಈಶಪ್ಪ ಭೂತೆ, ಅರ್ಜಿಯನ್ನು ಮರಳಿಸಿ, ನಿಯಮಾನುಸಾರ ಸಲ್ಲಿಸುವಂತೆ ಸೂಚಿಸಿದರು.

ಆಡಳಿತಾಧಿಕಾರಿ ಕಚೇರಿಗೆ ತೆರಳಲು ಹೊರಬಂದಾಗ ಸ್ಥಳೀಯರು ಆರೋಪಿ ಪರ ವಕೀಲರ ವಿರುದ್ಧ ಘೋಷಣೆ ಕೂಗಿ, ವಾಪಸ್ ಹೋಗಲು ಆಗ್ರಹಿಸಿದರು.ಕೆಲ ಕಿಡಿಗೇಡಿಗಳು ಬೆಂಗಳೂರು ವಕೀಲ ಕಾರಿನ ಮೇಲೆ ಕಲ್ಲು ತೂರಿದಾಗ ಹಿಂಬದಿ ಗಾಜು ಒಡೆಯಿತು. ಕೋರ್ಟ್ ಆವರಣದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಇದರಿಂದವಿಚಲಿತರಾದ ಬೆಂಗಳೂರಿನ ವಕೀಲರು ಅರ್ಜಿ ಸಲ್ಲಿಸದೆ ಪೊಲೀಸ್ ಭದ್ರತೆಯಲ್ಲಿ ವಾಪಸ್ಸಾದರು.

ನ್ಯಾಯಾಲಯದ ಬಾಗಿಲು ಮುಚ್ಚಿದ್ದಕ್ಕೆ ಆಕ್ಷೇಪ

ಭಾರೀ ಸಂಖ್ಯೆಯಲ್ಲಿ ವಕೀಲರು ಜಮಾಯಿಸಿದ್ದರಿಂದಾಗಿ ಜಿಲ್ಲಾ ನ್ಯಾಯಾಧೀಶ ಈಶಪ್ಪ ಕೆ. ಭೂತೆ ಅವರು ನ್ಯಾಯಾಲಯದ ಕೊಠಡಿಗಳ ಬಾಗಿಲುಗಳನ್ನು ಮುಚ್ಚಿಸಿದರು. ಇದು ಜಾಮೀನು ಕೋರಿ ಅರ್ಜಿ ಸಲ್ಲಿಸಲು ಬಂದಿರುವ ಪ್ರಕರಣವೇ ಹೊರತು, ಯಾವುದೇ ಅತ್ಯಾಚಾರದ ಪ್ರಕರಣವಲ್ಲ. ಬಾಗಿಲು ಮುಚ್ಚಿ ವಿಚಾರಣೆ ನಡೆಸುವುದು ಸರಿಯಲ್ಲ ಎಂದು ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

ವಕೀಲರ ಸಂಘ ಜವಾಬ್ದಾರಿ ವಹಿಸಿಕೊಳ್ಳುವುದಾದರೆ, ಬಾಗಿಲನ್ನೂ ತೆರೆಸಲಾಗುವುದು ಮತ್ತು ಪೊಲೀಸರನ್ನೂ ಕಳುಹಿಸಲಾಗುವುದು ಎಂಬ ಜಿಲ್ಲಾ ನ್ಯಾಯಾಧೀಶರ ಮಾತಿಗೆ, ವಕೀಲರ ಸಂಘ ಒಪ್ಪಿಕೊಳ್ಳಲಿಲ್ಲ. ಇಷ್ಟು ಹೊತ್ತಿಗಾಗಲೇ ಬೆಂಗಳೂರಿನ ವಕೀಲರು ಹೊರಬಂದರು.

ಕಾಂಗ್ರೆಸ್ ಕುಮ್ಮಕ್ಕು: ಶೆಟ್ಟರ್

ಬೆಂಗಳೂರು: ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಕುಮ್ಮಕ್ಕಿನಿಂದಲೇ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿ ಪ್ರತಿಭಟನೆಗಳಲ್ಲಿ ದೇಶ ವಿರೋಧಿ ಮತ್ತು ಪಾಕಿಸ್ತಾನ ಪರ ಹೇಳಿಕೆಗಳು ಕೇಳಿ ಬರುತ್ತಿವೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.

‘ದೇಶದ್ರೋಹಿಗಳಿಗೆ ಕಂಡಲ್ಲಿ ಗುಂಡಿಕ್ಕಿ’: ಶಾಸಕ ರಂಜನ್

ಸೋಮವಾರಪೇಟೆ (ಕೊಡಗು): ‘ಪಾಕಿಸ್ತಾನಕ್ಕೆ ಜಿಂದಾಬಾದ್’ ಎನ್ನುವ ದೇಶದ್ರೋಹಿಗಳಿಗೆ ಕಂಡಲ್ಲಿ ಗುಂಡಿಕ್ಕಬೇಕು’ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಇಲ್ಲಿ ಸೋಮವಾರ ಕರೆ ನೀಡಿದರು.
‘ಇತ್ತೀಚಿನ ದಿನಗಳಲ್ಲಿ ದೇಶದ್ರೋಹದ ಹೇಳಿಕೆಗಳು ಹೆಚ್ಚಾಗುತ್ತಿವೆ. ವಿದ್ಯಾರ್ಥಿನಿ ಅಮೂಲ್ಯ ‘ಪಾಕಿಸ್ತಾನಕ್ಕೆ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾರೆ. ಖಾಸಗಿ ಕಂಪನಿ ಉದ್ಯೋಗಿ ಆರ್ದ್ರಾ ‘ಕಾಶ್ಮೀರ ಮುಕ್ತಿ’ ಭಿತ್ತಿಪತ್ರ ಪ್ರದರ್ಶಿಸಿದ್ದಾರೆ. ಇಂತಹವರಿಗೆ ಕಂಡಲ್ಲಿ ಗುಂಡಿಕ್ಕಿ’ ಎಂದು ಹೇಳಿದರು.
‘ಭಾರತದಲ್ಲಿ ನೆಲೆ ನಿಂತು ಪರದೇಶಕ್ಕೆ ಜೈ ಎನ್ನುವ ದೇಶದ್ರೋಹಿಗಳಿವರು. ಇವರಿಗೆ ನೀರು, ಗಾಳಿ, ಆಹಾರ ಎಲ್ಲವೂ ಈ ದೇಶದ್ದೇ ಬೇಕು. ಆದರೆ, ಇವರ ದೇಶಪ್ರೇಮ ಮಾತ್ರ ಪಾಕಿಸ್ತಾನಕ್ಕೆ. ಆ ದೇಶಕ್ಕೆ ತಮ್ಮ ನಿಷ್ಠೆ ತೋರಿಸುತ್ತಾರೆ’ ಎಂದು ಕಿಡಿಕಾರಿದರು.
‘ದೇಶಕ್ಕೆ ಅಗೌರವ ತೋರಿಸಿ, ಪಾಕಿಸ್ತಾನದ ಬಗ್ಗೆ ವಾತ್ಸಲ್ಯವಿರುವವರು ಅಲ್ಲಿಗೆ ಹೋಗಿ ನೆಲೆಸಲಿ’ ಎಂದು ಹೇಳಿದರು.
‘ದೇಶದ್ರೋಹಿಗಳ ಗಡಿಪಾರು ಮಾಡದಿದ್ದಲ್ಲಿ ದೇಶಕ್ಕೆ ಗಂಡಾಂತರ ಎದುರಾಗಲಿದೆ’ ಎಂದು ರಂಜನ್ ಎಚ್ಚರಿಸಿದರು.

'ನಾಯಿಯಿಂತೆ ಹೊಡೆದು ಹಾಕಬೇಕು’

ಆಳಂದ (ಕಲಬುರ್ಗಿ ಜಿಲ್ಲೆ): ‘ಅಮೂಲ್ಯ, ಕವಿತಾ ರೆಡ್ಡಿ, ನಜ್ಮಾ ನಜೀರ್, ಆರ್ದ್ರಾ ಅವರಂತಹ ದೇಶದ್ರೋಹಿಗಳನ್ನು ನಾಯಿಗೆ ಹೊಡೆದ ಹಾಗೆ ಹೊಡೆದು ಹಾಕಬೇಕು’ ಎಂದು ಶ್ರೀರಾಮಸೇನೆ ಅಧ್ಯಕ್ಷ, ಆಂದೋಲಾದ ಸಿದ್ದಲಿಂಗ ಸ್ವಾಮೀಜಿ ಭಾನುವಾರ ರಾತ್ರಿ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೇಳಿದರು.

‘ಮಹಾರಾಷ್ಟ್ರದ ಮಾಜಿ ಶಾಸಕ ವಾರಿಸ್ ಪಠಾಣ್ ಹಿಂದೂಗಳ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಹಿಂದೂಗಳು ಮಲಗಿದರೆ ಕುಂಭಕರ್ಣ, ಎದ್ದರೆ ವೀರಭದ್ರನ ಅವತಾರಿಗಳು ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕು. ಗೋದ್ರಾ ಘಟನೆಯನ್ನು ಅವರು ಮರೆಯಬಾರದು’ ಎಂದರು.

ಶಾಲೆಯ ಗೋಡೆ ಮೇಲೆ‘ಪಾಕಿಸ್ತಾನ ಜಿಂದಾಬಾದ್’ : ಪ್ರತಿಭಟನೆ

ಹುಬ್ಬಳ್ಳಿ: ತಾಲ್ಲೂಕಿನ ಬುಡರಶಿಂಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆ ಹಾಗೂ ಬಾಗಿಲ ಮೇಲೆ ‘ಪಾಕಿಸ್ತಾನ ಜಿಂದಾಬಾದ್’ ಮತ್ತು ‘ಟಿಪ್ಪು ಸುಲ್ತಾನ್ ಶಾಲೆ’ ಎಂದು ಬರೆಯಲಾಗಿದೆ.

ಮುಖ್ಯ ಶಿಕ್ಷಕರ ಕೊಠಡಿ ಹಾಗೂ ಮೂರನೇ ತರಗತಿ ಮುಂಭಾಗದ ಗೋಡೆ ಮೇಲೆ ಸೇರಿದಂತೆ ಒಟ್ಟು ಐದು ಕಡೆ ಚಾಕ್ಪೀಸ್ನಿಂದ ಬರೆದಿರುವುದು ಕಂಡು ಬಂದಿದೆ.

‘ದೇಶದ್ರೋಹಿ ಚಟುವಟಿಕೆಗಳು ಹೆಚ್ಚಾಗುತ್ತಿವೆ. ರಾಜ್ಯದ ಕೆಲವು ಕಡೆ ಪಾಕಿಸ್ತಾನ ಪರವಾದ ಘೋಷಣೆಗಳು ಕೇಳಿ ಬರುತ್ತಿವೆ. ಗ್ರಾಮದಲ್ಲಿಯೂ ನಡೆದಿದೆ. ಇಂತಹ ಪ್ರಕರಣ ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

‘ಬೆಳಿಗ್ಗೆ ಶಾಲೆಗೆ ಬಂದಾಗ ವಿಷಯ ಗಮನಕ್ಕೆ ಬಂದಿದೆ. ಭಾನುವಾರ ರಜೆಯಿದ್ದ ಕಾರಣ ಕಿಡಿಗೇಡಿಗಳು ಈ ಕೃತ್ಯ ನಡೆಸಿರುವ ಸಾಧ್ಯತೆಯಿದೆ. ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರ ಗಮನಕ್ಕೆ ತಂದೆವು. ಪೊಲೀಸರಿಗೆ ದೂರು ನೀಡಿದ್ದೇವೆ’ ಎಂದು ಮುಖ್ಯ ಶಿಕ್ಷಕ ಎಂ.ಎಸ್. ಹೂಲಗೇರಿ ತಿಳಿಸಿದರು.

‘ಈ ಮೊದಲು ಎರಡ್ಮೂರು ಬಾರಿ ಶಾಲೆ ಗೋಡೆ ಮೇಲೆ ಟಿಪ್ಪು ಸುಲ್ತಾನ್ ಶಾಲೆ ಎಂದು ಬರೆದಿದ್ದರು.
ಆಗ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಈಗ ಪಾಕಿಸ್ತಾನ ಜಿಂದಾಬಾದ್ ಎಂದು ಬರೆದು ಸ್ವಾಭಿಮಾನ ಕೆಣಕಿದ್ದಾರೆ. ಬರೆದವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು’ ಎಂದು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಸದಸ್ಯ ವಸಂತ ಬಾವಿಮನಿ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.