ಭಾನುವಾರ, ಜನವರಿ 26, 2020
24 °C

25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜನ ನನ್ನನ್ನು ಗೆಲ್ಲಿಸುತ್ತಾರೆ: ಬನ್ನಿಕೋಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರು: ಅನ್ಯಾಯ, ಅಕ್ರಮದ ವಿರುದ್ಧ ಮತದಾರರು ಮತ ಚಲಾಯಿಸಿ ನನ್ನನ್ನು 25 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆಲ್ಲಿಸುತ್ತಾರೆ ಎಂದು ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬನ್ನಿಕೋಡ ತಿಳಿಸಿದರು. 

ಮತಚಲಾಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವಜ್ಞನ ನಾಡಿನಲ್ಲಿ ಕುತಂತ್ರ ರಾಜಕಾರಣ ನಿಲ್ಲಲಿ. ಅನರ್ಹ ಶಾಸಕನನ್ನು ಜೀವನಪರ್ಯಂತ ಅನರ್ಹಗೊಳಿಸಿ ಅವರ ರಾಜಕೀಯ ಜೀವನವನ್ನು ಅಂತ್ಯ ಮಾಡುವ ಶಕ್ತಿ ಮತದಾರರಿಗಿದೆ ಎಂದು ಹೇಳಿದರು.

ಅನರ್ಹ ಶಾಸಕ ಮತ್ತು ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲರ ಅನರ್ಹತೆ, ನಡತೆಯೇ ಅವರಿಗೆ ಮುಳುವಾಗಲಿದೆ ಎಂದರು. 

ಇದನ್ನೂ ಓದಿ: ರಾಣೆಬೆನ್ನೂರು, ಹಿರೇಕೆರೂರ: ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಮತದಾರರು

ಯು‌ಬಿ ಬಣಕಾರ ಹರಕೆಯ ಕುರಿಯಾಗಲಿದ್ದಾರೆ. ನನ್ನ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಹಿರೇಕೆರೂರು ಅಖಾಡದಲ್ಲೊಂದು ಸುತ್ತು| ಆಗ ಸೆಣಸಾಟ ಈಗ ಜೋಡಿಯಾಟ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು