ಜೀವನವನ್ನೂ ರೂಪಿಸಬಲ್ಲದು ಪೆಟ್ರೋಲಿಯಂ

ಬುಧವಾರ, ಮೇ 22, 2019
29 °C
ಪದವಿ ಪಡೆದ ತಕ್ಷಣ ಉದ್ಯೋಗ ನಿಶ್ಚಿತ – ಕೊಲ್ಲಿ ರಾಷ್ಟ್ರಗಳಲ್ಲಿ ಉತ್ತಮ ಅವಕಾಶ

ಜೀವನವನ್ನೂ ರೂಪಿಸಬಲ್ಲದು ಪೆಟ್ರೋಲಿಯಂ

Published:
Updated:
Prajavani

ಬೆಂಗಳೂರು: ಪಿಯುಸಿ ಮುಗಿಸಿ ಎಂಜಿನಿಯರಿಂಗ್‌ ಕ್ಷೇತ್ರದತ್ತ ದೃಷ್ಟಿ ನೆಟ್ಟಿರುವವರಿಗೆ ಉಪಯುಕ್ತ ಕೋರ್ಸ್‌ ಆಗಿ ಕಾಣಿಸುತ್ತಿದೆ ಪೆಟ್ರೋಲಿಯಂ ಎಂಜಿನಿಯರಿಂಗ್‌. ಕಚ್ಚಾ ತೈಲ, ನೈಸರ್ಗಿಕ ಅನಿಲವನ್ನು ಒಳಗೊಂಡ ಹೈಡ್ರೋ ಕಾರ್ಬನ್‌ ಉತ್ಪಾದನೆಗೆ ಸಂಬಂಧಿಸಿದ ಕಲಿಕೆ ಇದು.

4 ವರ್ಷದ ಬಿ.ಟೆಕ್‌ನಲ್ಲಿ ಥಿಯರಿಯಲ್ಲದೆ, ಪ್ರಾಯೋಗಿಕ ಮತ್ತು ಪ್ರಾಜೆಕ್ಟ್‌ ಕೆಲಸಗಳಿರುತ್ತವೆ. ಕ್ಷೇತ್ರ ಭೇಟಿಯೂ ಅಗತ್ಯ. ಹೀಗಾಗಿ ಪೆಟ್ರೋಲಿಯಂ ಉತ್ಪನ್ನಗಳನ್ನು ನಿರ್ವಹಿಸುವಂತಹ ನಗರ/ ಕೈಗಾರಿಕಾ ಪ್ರದೇಶಗಳಲ್ಲಿನ ಕಾಲೇಜುಗಳನ್ನೇ ಆಯ್ಕೆ ಮಾಡಿಕೊಂಡರೆ ಸೂಕ್ತ. ರಾಜ್ಯದಲ್ಲಿ ಕೆಲವೇ ಕೆಲವು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಈ ಕೋರ್ಸ್‌ ಇದ್ದು, ಬೆಂಗಳೂರಿನ ಯಲಹಂಕ ಸಮೀಪದ ರಾಜಾನುಕುಂಟೆ ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ಈ ಕೋರ್ಸ್‌ ಮೂಲಕ ಗಮನ ಸಳೆದಿದೆ. ಪಿಯುಸಿಯಲ್ಲಿ ಗಣಿತ, ಭೌತವಿಜ್ಞಾನ, ರಸಾಯನವಿಜ್ಞಾನ ಓದಿರಬೇಕು. ಕನಿಷ್ಠ ಶೇ 60ರಷ್ಟು ಅಂಕ ಗಳಿಸಿರಬೇಕು. ಕೆಲವು ವಿಶ್ವವಿದ್ಯಾಲಯಗಳು ಶೇ 80ರಷ್ಟು ಅಂಕ ನಿರೀಕ್ಷಿಸುತ್ತವೆ. ರಾಜ್ಯದಲ್ಲಿ ಜೆಇಇ ಮೈನ್‌, ಸಿಇಟಿ ಬರೆದವರು ಈ ಕೋರ್ಸ್‌ಗೆ ಪ್ರವೇಶಿಸಬಹುದು. ಜೆಇಇ ಅಡ್ವಾನ್ಸ್‌ಡ್‌ನಲ್ಲಿ ಉತ್ತೀರ್ಣರಾದವರು ಐಐಟಿಗಳಲ್ಲೂ ಈ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬಹುದು. ರಾಷ್ಟ್ರಮಟ್ಟದಲ್ಲಿ ಇದಕ್ಕಾಗಿಯೇ ಯೂನಿವರ್ಸಿಟಿ ಆಫ್‌ ಪೆಟ್ರೋಲಿಯಂ ಆ್ಯಂಡ್‌ ಎನರ್ಜಿ ಸ್ಟಡೀಸ್‌ (ಯುಪಿಇಎಸ್‌ಇಎಟಿ) ಎಂಬ ಪರೀಕ್ಷೆ ಇದೆ. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವುದು ಕಡ್ಡಾಯ. ಇಲ್ಲಿ ಬೋರ್ಡ್‌ ಮೆರಿಟ್‌ ಸೀಟು ಸಿಗಬೇಕಿದ್ದರೆ ಶೇ 80ಕ್ಕಿಂತ ಅಧಿಕ ಅಂಕ ಗಳಿಸಬೇಕು.

‘ಸಿಇಟಿಯಲ್ಲಿ ರ‍್ಯಾಂಕ್‌ ಗಳಿಸಿದವರು ನಮ್ಮ ಕಾಲೇಜ್‌ನಲ್ಲಿ ಪ್ರವೇಶ ಪಡೆಯುತ್ತಿದ್ದಾರೆ. ಜತೆಗೆ ಮ್ಯಾನೇಜ್‌ಮೆಂಟ್‌ ಸೀಟೂ ಇದೆ. ಪ್ರಾಯೋಗಿಕ ತರಬೇತಿ ಉತ್ತಮವಾಗಿದೆ. ಹೀಗಾಗಿ ಕೋರ್ಸ್‌ ಉಪಯುಕ್ತವಾಗಿದೆ’ ಎಂದು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದ ನೇಮಕಾತಿ ವಿಭಾಗದ ಅಧಿಕಾರಿಗಳು ತಿಳಿಸಿದರು (ಮಾಹಿತಿಗೆ: 080– 23093500, www.presidencyuniversity.in). ಇಲ್ಲಿ ನಾಲ್ಕು ವರ್ಷದ ಬಿ.ಟೆಕ್‌ ಕೋರ್ಸ್‌ಗೆ ₹ 7.20 ಲಕ್ಷ ಶುಲ್ಕ ಇದೆ.

 ಅವಕಾಶ ಹಲವು

ಪೆಟ್ರೋಲಿಯಂ ಎಂಜಿನಿಯರ್‌ಗಳು ತಮ್ಮ ಹುದ್ದೆಗೂ ಮೀರಿದ ಪಾತ್ರ ನಿರ್ವಹಿಸುವುದು ಸಾಧ್ಯ. ಬಹುಬೇಗ ಮ್ಯಾನೇಜ್‌ಮೆಂಟ್‌ ಹಂತಕ್ಕೂ ಏರಬಹುದು. ಕೆಮಿಸ್ಟ್‌ ಮತ್ತು ಮೆಟೀರಿಯಲ್‌ ಸೈಂಟಿಸ್ಟ್‌, ಚೀಫ್‌ ಪೆಟ್ರೋಲಿಯಂ ಎಂಜಿನಿಯರ್‌, ಡ್ರಿಲ್ಲಿಂಗ್‌ ಎಂಜಿನಿಯರ್‌, ಜಿಯೊಸೈಂಟಿಸ್ಟ್‌, ಇಂಡಸ್ಟ್ರಿಯಲ್ ಎಂಜಿನಿಯರ್, ರಿಫೈನರಿ ಮ್ಯಾನೇಜರ್‌ ಸಹಿತ ಹಲವಾರು ಅವಕಾಶಗಳು ಇವೆ.

ದೇಶದ ಪ್ರಮುಖ ಕಾಲೇಜುಗಳು

ಆಲಿಗಡ ಮುಸ್ಲಿಂ ವಿಶ್ವವಿದ್ಯಾಲಯ, ಅಣ್ಣಾ ವಿ.ವಿ ಚೆನ್ನೈ, ಭಗವಂತ್‌ ವಿ.ವಿ– ಇನ್‌ಸ್ಟಿಟ್ಯೂಟ್‌ ಆಪ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ, ಅಜ್ಮೇರ್‌, ದಿಬ್ರುಗಡ ವಿ.ವಿ (ಡಿಯುಐಇಟಿ); ಎಚ್‌.ಪಟೇಲ್‌ ಕಾಲೇಜ್‌ ಆಫ್‌ ಎಂಜಿನಿಯರಿಂಗ್, ವಲ್ಲಭ ವಿದ್ಯಾನಗರ, ಗುಜರಾತ್‌; ಗ್ಲೋಬಲ್‌ ಇನ್‌ಸ್ಟಿಟ್ಯುಟ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ, ವೆಲ್ಲೂರು; ಐಐಟಿ ಮುಂಬೈ, ಐಐಟಿ ಚೆನ್ನೈ, ಇಂಡಿಯನ್‌ ಸ್ಕೂಲ್‌ ಆಫ್‌ ಮೈನ್ಸ್‌, ಧನಬಾದ್‌; ಮಹಾರಾಷ್ಟ್ರ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ (ಎಂಐಟಿ) ಪುಣೆ; ಪಂಡಿತ್‌ ದೀನ್‌ದಯಾಳ್‌ ಪೆಟ್ರೋಲಿಯಂ ವಿ.ವಿ (ಪಿಡಿಪಿಯು) ಗಾಂಧಿನಗರ; ರಾಜೀವ್‌ ಗಾಂಧಿ ಇನ್‌ಸ್ಟಿಟ್ಯೂಟ್‌ ಆಫ್‌ ಪೆಟ್ರೋಲಿಯಂ ಟೆಕ್ನಾಲಜಿ (ಆರ್‌ಜಿಐಪಿಟಿ) ಉತ್ತರ ಪ್ರದೇಶ; ಯೂನಿವರ್ಸಿಟೀಸ್‌ ಆಫ್‌ ಪೆಟ್ರೋಲಿಯಂ ಆ್ಯಂಡ್‌ ಎನರ್ಜಿ ಸ್ಟಡೀಸ್‌ (ಯುಪಿಇಎಸ್‌) ಡೆಹ್ರಾಡೂನ್‌.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !