ಶುಕ್ರವಾರ, ಸೆಪ್ಟೆಂಬರ್ 17, 2021
24 °C

ಹೆರಿಗೆ ವೇಳೆ ಮಹಿಳೆ ಸಾವು: ಸಂಬಂಧಿಕರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಚನ್ನಪಟ್ಟಣದ ಬಾಲು ನರ್ಸಿಂಗ್ ಹೋಮ್‌ನಲ್ಲಿ ಸೋಮವಾರ ಹೆರಿಗೆ ವೇಳೆ ದೀಕ್ಷಿತಾ (19) ಎಂಬ ಮಹಿಳೆ ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯ ಖಂಡಿಸಿ ಆಕೆಯ ಸಂಬಂಧಿಕರು ಆಸ್ಪತ್ರೆಯಲ್ಲಿ ದಾಂದಲೆ ನಡೆಸಿದರು. 

ತಾಲ್ಲೂಕಿನ ಮಳೂರುಪಟ್ಟಣ ಗ್ರಾಮದವರಾದ ದೀಕ್ಷಿತಾ ಹೆರಿಗೆ ಸಲುವಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹೆರಿಗೆ ಸಂದರ್ಭ ಶಸ್ತ್ರಚಿಕಿತ್ಸೆ ಕೊಠಡಿಯಲ್ಲಿಯೇ ಸಾವನ್ನಪ್ಪಿದರು. ಇದರಿಂದ ಆತಂಕಗೊಂಡ ವೈದ್ಯೆ ಶೈಲಜಾ ಹಾಗೂ ಸಿಬ್ಬಂದಿ‌ ಶವವನ್ನು ಅಲ್ಲಿಯೇ ಬಿಟ್ಟು ಆಸ್ಪತ್ರೆಯಿಂದ ಕಾಲ್ಕಿತ್ತರು. ಇದರಿಂದ ಆಕ್ರೋಶಗೊಂಡ ದೀಕ್ಷಿತಾ ಸಂಬಂಧಿಕರು ಆಸ್ಪತ್ರೆಯ ಗಾಜು ಪುಡಿಪುಡಿ ಮಾಡಿ, ಪೀಠೋಪಕರಣ ಧ್ವಂಸಗೊಳಿಸಿ ಕಟ್ಟಡದ ಮುಂಭಾಗ ಪ್ರತಿಭಟನೆ ನಡೆಸಿದರು.

ದೀಕ್ಷಿತಾಗೆ ಗಂಡು ಮಗು ಜನಿಸಿದ್ದು, ಅದಾದ ಅರ್ಧ ಗಂಟೆಯಲ್ಲಿ‌ ತಾಯಿ‌ ಸಾವನ್ನಪ್ಪಿದರು. ಸದ್ಯ‌ ಮಗು ಆರೋಗ್ಯದಿಂದ ಇದೆ ಎಂದು ವೈದ್ಯರು ತಿಳಿಸಿದ್ದಾರೆ.


ದೀಕ್ಷಿತಾಗೆ ಜನಿಸಿರುವ ಗಂಡು ಮಗು 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು