ಮಂಗಳೂರು: ‘ಈ ಹಿಂದೆ ನಾನೊಂದೆಡೆ ಮೌಲ್ಯಮಾಪನಕ್ಕೆ ಹೋಗಿದ್ದೆನು. ಅಲ್ಲಿನ ಮುಖ್ಯಸ್ಥರು ಬಂದು, ‘ನೀವೇನು ಸಾರ್. ಇಲ್ಲಿ ನೋಡಿ ಒಂದೇ ದಿನದಲ್ಲಿ ಒಬ್ಬರು 500 ಪ್ರಾಜೆಕ್ಟ್ ಹಾಗೂ ಇನ್ನೊಬ್ಬರು 350 ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ್ದಾರೆ’ ಎಂದಾಗ ನಾನು ದಂಗಾದೆ’ ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ ಹೇಳಿದರು.

ಅವರು, ವಿಶ್ವವಿದ್ಯಾಲಯದಲ್ಲಿ ನಡೆದ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಅವರು ಮೌಲ್ಯಮಾಪನದ ಸ್ಥಿತಿಯನ್ನು ಬಿಚ್ಚಿಟ್ಟರು.

‘ಒಂದು ದಿನದಲ್ಲಿ 60 ಪತ್ರಿಕೆ ಮೌಲ್ಯಮಾಪನ ಮಾಡುವ ಸಾಮರ್ಥ್ಯ ನನ್ನದಾಗಿತ್ತು. ಒತ್ತಡಕ್ಕೆ ಮಣಿದು ಹೆಚ್ಚುವರಿ ಅವಧಿ ಕುಳಿತುಕೊಂಡು 90 ಪತ್ರಿಕೆಗಳ ಮೌಲ್ಯಮಾಪನ ಮಾಡಲಷ್ಟೇ ಶಕ್ತನಾಗಿದ್ದೆನು. ಹೀಗಾಗಿ, ಗಾಬರಿಗೆ ಒಳಗಾದ ನಾನು, ‘ಆ ಪ್ರೊಫೆಸರ್‌ಗಳು ಎಲ್ಲಿದ್ದಾರೆ?’ ಎಂದು ಕೇಳಿದೆ. ‘ಅವರು ಆಗಲೇ ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ, ಹೊರ ಹೋಗಿ ಆಯಿತು’ ಎಂಬ ಉತ್ತರ ಬಂತು’ ಎಂದರು.

‘ಯುಜಿಸಿ ವೇತನ ಪಡೆಯುವ ಪ್ರಾಧ್ಯಾಪಕರು ಸೇಫ್. ಆದರೆ, ವಿದ್ಯಾರ್ಥಿಗಳು ಹಾಗೂ ಶಿಕ್ಷಣದ ಭವಿಷ್ಯ ಆಲೋಚಿಸಿ ದಂಗಾದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.