‘ಕಾವೇರಿ’ ತಾಲ್ಲೂಕಿಗೆ ಆಗ್ರಹಿಸಿ ಕುಶಾಲನಗರ ಬಂದ್‌

7

‘ಕಾವೇರಿ’ ತಾಲ್ಲೂಕಿಗೆ ಆಗ್ರಹಿಸಿ ಕುಶಾಲನಗರ ಬಂದ್‌

Published:
Updated:

ಕುಶಾಲನಗರ: ‘ಕಾವೇರಿ ತಾಲ್ಲೂಕು’ ಘೋಷಣೆ ಕೈಬಿಟ್ಟ ಮೈತ್ರಿ ಸರ್ಕಾರದ ಕ್ರಮ ಖಂಡಿಸಿ ಸೋಮವಾರ ಕುಶಾಲನಗರದಲ್ಲಿ ಸಂಪೂರ್ಣ ಬಂದ್ ನಡೆಯುತ್ತಿದೆ.

ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲ್ಲೂಕಿನ ಕುಶಾಲನಗರ ಕೇಂದ್ರವಾಗಿಸಿಕೊಂಡು ಕಾವೇರಿ ತಾಲ್ಲೂಕು ರಚಿಸುವಂತೆ ಮನವಿ ಸಲ್ಲಿಸಲಾಗಿತ್ತು. ಎರಡು ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಆದರೆ, ಕಳೆದ ಎರಡು ಬಜೆಟ್‌ನಲ್ಲೂ ಕಾವೇರಿ ತಾಲ್ಲೂಕು ಘೋಷಣೆ ಆಗಿಲ್ಲ. ಇದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಕಾವೇರಿ ತಾಲ್ಲೂಕು ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಹಾಗೂ ರಸ್ತೆತಡೆ ನಡೆಯುತ್ತಿದ್ದು, ಅಂಗಡಿ ಮುಂಗಟ್ಟುಗಳು ಮುಚ್ವಿವೆ. ಬಂದ್‌ಗೆ ವಿವಿಧ ಸಂಘಟನೆಗಳೂ ಬೆಂಬಲ ನೀಡಿವೆ.

ಇದನ್ನೂ ಓದಿ... ಜಿಲ್ಲೆ ಜನರ ಮನ ಗೆಲ್ಲುವ ಪ್ರಯತ್ನ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !