ಬುಧವಾರ, ಫೆಬ್ರವರಿ 26, 2020
19 °C

ಸಮಾಜವಾದಿ ಹೋರಾಟಗಾರ ರಾಚಪ್ಪ ಹಡಪದ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಸಮಾಜವಾದಿ ಹೋರಾಟಗಾರ ರಾಚಪ್ಪ ಹಡಪದ (84) ಅವರು ಮಂಗಳವಾರ ಇಲ್ಲಿ ನಿಧನರಾದರು.

ಕ್ಷೌರಿಕ ವೃತ್ತಿಯೊಂದಿಗೆ ರಾಚಪ್ಪ ಅವರು ಲೋಹಿಯಾ, ಶಾಂತವೇರಿ ಗೋಪಾಲಗೌಡ ಅವರ ಸಂಪರ್ಕ ಪಡೆದು ಸಮಾಜವಾದಿ ಹೋರಾಟಕ್ಕೆ ಧುಮುಕಿದರು. ತಾಲ್ಲೂಕಿನ ಹೆಬ್ಬಳ್ಳಿಯಲ್ಲಿ ನಡೆದ ಕರ್ನಾಟಕದ 2ನೇ ಭೂ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇವರ ಸಮಾಜವಾದ ಹೋರಾಟವನ್ನು ಪರಿಗಣಿಸಿ ರಾಜ್ಯ ಸರ್ಕಾರವು 2018ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.

ಬೈಲಹೊಂಗಲ ತಾಲ್ಲೂಕಿನ ಹೊಳೆಹೊಸೂರಿನವರಾದ ರಾಚಪ್ಪ ನವಲಗುಂದದಲ್ಲಿ ವೃತ್ತಿ ಜೀವನ ಆರಂಭಿಸಿದರು. ಇಲ್ಲಿನ ರಾಜೀವಗಾಂಧಿ ನಗರದಲ್ಲಿ ಒಬ್ಬಂಟಿಯಾಗಿಯೇ ನೆಲೆಸಿದ್ದರು. ಮೃತರ ಅಂತ್ಯಕ್ರಿಯೆಯನ್ನು ಅವರ ಅಭಿಮಾನಿಗಳು ಮಂಗಳವಾರ ಇಲ್ಲಿ ನೆರವೇರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು