ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಪರೀಕ್ಷೆ: ಸುರೇಶ್‌ ಕುಮಾರ್‌ ಸುಳ್ಳು ಸುದ್ದಿ ಹಂಚಿಕೊಂಡರೇ?

ಸಜ್ಜನ ರಾಜಕಾರಣಿ ಹೇಳಿದ ಚುನಾವಣಾ ಸುಳ್ಳು
Last Updated 1 ಏಪ್ರಿಲ್ 2019, 6:05 IST
ಅಕ್ಷರ ಗಾತ್ರ

ಬೆಂಗಳೂರು:’ಕನ್ನಡಿಗರಿಗೆ ರೈಲ್ವೆ ಪರೀಕ್ಷೆಯನ್ನು ಕನ್ನಡದಲ್ಲಿಯೇ ಬರೆಯಲು ಮೊದಲ ಬಾರಿಗೆ ಮೋದಿ ಸರ್ಕಾರ ಅವಕಾಶ ಕಲ್ಪಿಸಿದೆ’ ಎಂದು ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಪ್ರಕಟಿಸಿಕೊಂಡಿರುವ ಪೋಸ್ಟರ್‌ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಇದು ಮೋದಿ ಸರ್ಕಾರದಲ್ಲಿ ಆದ ಬದಲಾವಣೆಯೋ ಅಥವ ರೈಲ್ವೆ ಸಚಿವೆ ಆಗಿದ್ದಾಗದೀದಿ ಮಾಡಿದ ಘೋಷಣೆಯೋ ಎಂದು ಪ್ರಶ್ನಿಸಲಾಗುತ್ತಿದೆ.

ರೈಲ್ವೆ ಇಲಾಖೆಗೆ ಸೇರ ಬಯಸುವ ಆಕಾಂಕ್ಷಿಗಳಿಗೆ ಹಿಂದಿ, ಇಂಗ್ಲಿಷ್‌ ಹೊರತಾಗಿ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ‘ಮೋದಿ ಸರ್ಕಾರದಿಂದ ಇದೇ ಮೊದಲ ಬಾರಿಗೆ ಕನ್ನಡಿಗರಿಗೆ ಅವಕಾಶ..’ ಎಂಬ ಸಾಲು ಒಳಗೊಂಡಿರುವ ಪೋಸ್ಟರನ್ನು ಸಜ್ಜನ ರಾಜಕಾರಣಿ ಎಂದೇ ಹೆಸರಾಗಿರುವಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಪ್ರಕಟಿಸಿಕೊಂಡಿದ್ದಾರೆ.

ಇದು ಹಲವರ ಕೆಂಗಣ್ಣಿಗೆ ಗುರಿಯಾಗಿದ್ದು, ‘ಕನ್ನಡಿಗರ ಹೋರಾಟದ ಫಲವಾಗಿ 2009–10ರಲ್ಲಿಯೇ ದೊರೆತ ಅವಕಾಶವನ್ನು ಮೋದಿ ಸರ್ಕಾರ ಮಾಡಿದ್ದು ಎಂದು ಹೇಳಿತ್ತಿದ್ದೀರಿ,..’, ‘...ಸುರೇಶ್‌ ಕುಮಾರ್‌ ಹೇಳುತ್ತಿರುವುದು ಯಾವ ಪರೀಕ್ಷೆ ಬಗೆಗೆ..’, ‘ಇದು ಕನ್ನಡ ಸಂಘಟನೆಗಳು ನಡೆಸಿದ್ದ ಹೋರಾಟಗಳ ಪ್ರತಿಫಲ..’, ‘ಸುರೇಶಣ್ಣ ಇದು 2009ರ ನ್ಯೂಸ್‌...ಓದಿ ಅಪ್‌ಡೇಟ್‌ ಆಗಿ’,..ಎಂದೆಲ್ಲ ಬಹಳಷ್ಟು ಜನ ಪ್ರತಿಕ್ರಿಯಿಸಿದ್ದಾರೆ ಹಾಗೂ ಪ್ರಶ್ನಿಸಿದ್ದಾರೆ.

2009ರಲ್ಲಿ ರೈಲ್ವೆ ಸಚಿವೆ ಮಮತಾ: ‘ರೈಲ್ವೆ ನೇಮಕಾತಿ ಮಂಡಳಿ(ಆರ್‌ಆರ್‌ಬಿ)’ಯ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿಯೇ ಬರೆಯಲು ಅವಕಾಶ ಕಲ್ಪಿಸಿರುವುದಾಗಿ 2009ರಲ್ಲಿ ಆಗಿನ ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ ಘೋಷಿಸಿದ್ದರು. ಈ ಘೋಷಣೆ ಕುರಿತಾದ ವರದಿಯನ್ನೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ರೈಲ್ವೆ ಇಲಾಖೆಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನುಕನ್ನಡದಲ್ಲಿಯೇ ಬರೆಯುವ ಕುರಿತು ಪ್ರಜಾವಾಣಿ 2012ರಲ್ಲಿ ವಿವರವಾಗಿ ಲೇಖನ ಪ್ರಕಟಿಸಿತ್ತು. ಲೇಖನದ ಲಿಂಕ್‌–ರೈಲ್ವೆ: ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ

2010ರ ರೈಲ್ವೆ ಬಜೆಟ್‌ ಸಾರಾಂಶ ಪ್ರಕಟಿಸಿರುವ ಪಿಐಬಿ, ರೈಲ್ವೆ ಸಚಿವೆ ಮಮತಾ ಮ್ಯಾನರ್ಜಿಅವರು ಪ್ರಾದೇಶಿಕ ಭಾಷೆಗಳಲ್ಲಿ ರೈಲ್ವೆ ಪರೀಕ್ಷೆ ಕುರಿತುಭಾಷಣದಲ್ಲಿನ ಪ್ರಸ್ತಾಪವನ್ನು ಪ್ರಕಟಿಸಿತ್ತು.

‘ಹಲವು ದಶಕಗಳ ಕನ್ನಡಿಗರ ಕನಸು ನನಸು’ ಎಂಬ ಶೀರ್ಷಿಕೆಯಡಿ ಚೌಕಿದಾರ್‌ ಸುರೇಶ್‌ ಕುಮಾರ್ ಅವರ ಟ್ವಿಟರ್‌ ಖಾತೆಯಲ್ಲಿ ಬಿಜೆಪಿ ಕರ್ನಾಟಕ ರೂಪಿಸಿರುವ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಕುರಿತು ಪ್ರತಿಕ್ರಿಯೆಗಾಗಿ ಪ್ರಜಾವಾಣಿ ಸುರೇಶ್‌ ಕುಮಾರ್‌ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದು, ಲಭ್ಯವಾಗಿಲ್ಲ.

‘ಸಜ್ಜನ ರಾಜಕಾರಣಿಯಿಂದ ಇಂಥ ಸುಳ್ಳಿನ ರಾಜಕಾರಣವೇಕೆ’ ಎಂಬ ಪ್ರಶ್ನೆಗಳನ್ನು ಟ್ವಿಟರ್‌ ಹಾಗೂ ಫೇಸ್‌ಬುಕ್‌ಗಳಲ್ಲಿ ಕೇಳಲಾಗುತ್ತಿದೆ. ‘ಕೆಲವರು ಬಿಜೆಪಿಯ ಸುಳ್ಳುಬುರುಕರು ಎಂದರೆ, ಸತ್ಯ ತಿರುಚಲಾಗಿದೆ, ಇದೆಂಥ ಮೋದಿ ಭಕ್ತಕೆ,...’ ಎಂದೆಲ್ಲ ಪ್ರತಿಕ್ರಿಯಿಸಿದ್ದಾರೆ.

ನಿಮ್ಮ ಮೇಲೆ ಅಪಾರ ಗೌರವವಿಗೆ ಮಾಹಿತಿ ಸರಿಯಾಗಿ ತಿಳಿದು, ಪ್ರಕಟಿಸಿ ಎಂದು ಹಲವು ಟ್ವೀಟಿಗರು ಸಲಹೆಯನ್ನೂ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT