ಮಂಗಳವಾರ, ಆಗಸ್ಟ್ 3, 2021
27 °C

ರೈಲ್ವೆ ಖಾಸಗೀಕರಣ ಅಲ್ಲ, ಸಹಭಾಗಿತ್ವ: ಕೇಂದ್ರ ಸಚಿವ ಸುರೇಶ್ ಅಂಗಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ರೈಲ್ವೆ ಇಲಾಖೆಯನ್ನು ಸಂಪೂರ್ಣ ಖಾಸಗೀಕರಣ ಮಾಡುತ್ತಿಲ್ಲ. ಜನರ ಅನುಕೂಲಕ್ಕಾಗಿ ವ್ಯವಸ್ಥೆಗಳನ್ನು ಕಲ್ಪಿಸಲು ಹಾಗೂ ಜಾಲ ವಿಸ್ತರಿಸಲು ಖಾಸಗಿ ಸಹಭಾಗಿತ್ವಕ್ಕಾಗಿ ಪ್ರೇರೇಪಿಸಲಾಗುತ್ತಿದೆ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.

ಇಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಇಲಾಖೆಯನ್ನು ಖಾಸಗೀಕರಣ ಮಾಡಲಾಗುತ್ತಿದೆ ಎಂದು ದೂರುವ ಅಗತ್ಯವಿಲ್ಲ. ಮೊದಲು ದೂರದರ್ಶನ ವಾಹಿನಿ ಒಂದೇ ಇತ್ತು. ಖಾಸಗೀಕರಣಕ್ಕೆ ಅವಕಾಶ ಕೊಟ್ಟ ಬಳಿಕ ಹಲವು ಖಾಸಗಿ ವಾಹಿನಿಗಳು ಬಂದವು. ಉದ್ಯೋಗಾವಕಾಶ ಹಾಗೂ ಆರ್ಥಿಕತೆ ಹೆಚ್ಚಿತು. ರೈಲ್ವೆ ವಿಷಯದಲ್ಲೂ ಹಾಗೆಯೇ’ ಎಂದು ಸಮರ್ಥಿಸಿಕೊಂಡರು.

‘ಮತ್ತಷ್ಟು ರೈಲುಗಳು ಸಂಚರಿಸುವಂತಾಗಲಿ. ದೇಶದ ಆರ್ಥಿಕತೆ ಬೆಳೆಯಲಿ. ಉದ್ಯೋಗಗಳು ಸೃಷ್ಟಿಯಾಗಲಿ ಎನ್ನುವುದು ನಮ್ಮ ಸರ್ಕಾರದ ಉದ್ದೇಶವಾಗಿದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು