ಭಾನುವಾರ, ಆಗಸ್ಟ್ 25, 2019
24 °C

ಸತತ ಮಳೆ: ಅಪಾಯದ ಮಟ್ಟ ಮೀರಿದ ಗಂಗಾವಳಿ, ಗ್ರಾಮಸ್ಥರಿಂದ ಮೊಸಳೆ ಸೆರೆ

Published:
Updated:

ಗೋಕರ್ಣ: ಒಂದು ವಾರದಿಂದ ಸುರಿದ ಭಾರಿ ಮಳೆಯಿಂದಾಗಿ ಸಮೀಪದ ಗಂಗಾವಳಿ ನದಿಯು ಅಪಾಯದ ಮಟ್ಟ ಮೀರಿ ಹರಿದು, ಪ್ರವಾಹ ಪರಿಸ್ಥಿತಿ ಉಂಟು ಮಾಡಿತ್ತು. ಹೀಗೆ ನದಿಯಿಂದ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದು ಸ್ಥಳೀಯರೊಬ್ಬರ ಮನೆಯ ಬಳಿ ಕಾಣಿಸಿಕೊಂಡ ಮೊಸಳೆಯೊಂದನ್ನು ಕಂಡು ಇದೀಗ ಗ್ರಾಮಸ್ಥರು ಭಯಭೀತಗೊಂಡಿದ್ದಾರೆ.

ಗೋಕರ್ಣದ ನಾಡುಮಾಸ್ಕೇರಿ ಗ್ರಾಮದ ಶಿವು ಗೌಡ ಎಂಬುವವರ ಮನೆಯ ಬಳಿ ಮೊಸಳೆ ಬಂದಿದ್ದು, ಇದು ಮನೆಯವರಲ್ಲಿ ಭಯದ ವಾತಾವರಣ ಉಂಟು ಮಾಡಿತು. 

ಇದನ್ನೂ ಓದಿ... ತೀರ್ಥಹಳ್ಳಿ | ಪ್ರವಾಹ ಸಂತ್ರಸ್ತರಿಗೆ ವಿಶೇಷ ಪ್ಯಾಕೇಜ್, ಮುಖ್ಯಮಂತ್ರಿ ಭರವಸೆ

ಗಂಗಾವಳಿ ನದಿ ತೀರವು ಅರಣ್ಯ ಪ್ರದೇಶದಿಂದ ಕೂಡಿದ್ದು, ಇದು ವನ್ಯಜೀವಿಗಳ ವಾಸಸ್ಥಾನವಾಗಿದೆ. ಇದೀಗ ಪ್ರವಾಹದಿಂದ ಎಲ್ಲವೂ ಊರಿನತ್ತ ಕೊಚ್ಚಿಕೊಂಡು ಬಂದಿದ್ದು, ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿದೆ.

ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಉರಗತಜ್ಞ ಪವನ ನಾಯ್ಕ ಹಾಗೂ ಅಶೋಕ ನಾಯ್ಕ ತದಡಿ, ಸ್ಥಳೀಯರ ಸಹಕಾರದಿಂದ ಮೊಸಳೆಯನ್ನ ಹಿಡಿದು ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.

'ಪ್ರವಾಹದಿಂದಾಗಿ ಹಾವು, ಮೊಸಳೆ ಸೇರಿದಂತೆ ಇನ್ನಿತರ ವನ್ಯಜೀವಿಗಳು ಗ್ರಾಮಗಳತ್ತ ಬಂದಿರುವುದು ಸದ್ಯ ಸಾಮಾನ್ಯವಾಗಿರಲಿದೆ. ಹೀಗೆ ಯಾವುದೇ ವನ್ಯಜೀವಿಗಳು ಕಾಣಿಸಿಕೊಂಡಲ್ಲಿ ಭಯಗೊಳ್ಳದೆ, ತಕ್ಷಣ ನಮಗೆ ಕರೆ ಮಾಡಿ. ಸಂತ್ರಸ್ತರಿಗಾಗಿ ಯಾವುದೇ ಸಮಯದಲ್ಲೂ ನಾವು ಈ ವನ್ಯಜೀವಿಗಳನ್ನು ಸೆರೆ ಹಿಡಿದು, ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಕಾರ್ಯಕ್ಕೆ ತಯಾರಿದ್ದೇವೆ' ಎಂದು ಪವನ್ ಹಾಗೂ ಅಶೋಕ ಹೇಳಿದರು.

Post Comments (+)