ಸೋಮವಾರ, ಜೂನ್ 1, 2020
27 °C

ಬೆಂಗಳೂರು: ಪಡಿತರ ವಿತರಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೋವಿಡ್-19ರ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಮಂಗಳವಾರ ಜೆ.ಸಿ ನಗರದಲ್ಲಿ ಬಡವರಿಗೆ ದಿನಸಿ ಆಹಾರ ಪದಾರ್ಥಗಳನ್ನು ವಿತರಿಸಿದರು.

ಅಕ್ಕಿ, ಬೇಳೆ, ಎಣ್ಣೆ ಮತ್ತು ಸಾಂಬಾರು ಪದಾರ್ಥಗಳನ್ನು ಒಳಗೊಂಡ 19 ಕೆ.ಜಿ ತೂಕದ 500 ಕಿಟ್‌ಗಳನ್ನು ವಿತರಿಸಲಾಯಿತು. 
‘ಬುಧವಾರ ಮತ್ತು ಗುರುವಾರವೂ ನಗರದ ವಿವಿಧೆಡೆ ಕೊಳಗೇರಿ ನಿವಾಸಿಗಳಿಗೆ ಅಗತ್ಯ ದಿನಸಿ ಪದಾರ್ಥ ವಿತರಣೆ ಮಾಡಲಾಗುವುದು’ ಎಂದು ದೀಕ್ಷಿತ್ ಅವರು ತಿಳಿಸಿದರು.

ವಿತರಣೆ ವೇಳೆ ಕೃಷ್ಣ ದೀಕ್ಷಿತ್ ಅವರ ಪತ್ನಿ ಯೋಗಿನಿ ದೀಕ್ಷಿತ್, ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅವರ ಪತ್ನಿ ನಾಝಿಹಾ ರಿಜ್ವಾನ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು