ಬುಧವಾರ, ಜನವರಿ 29, 2020
30 °C
ಆನ್‌ಲೈನ್‌ ಮೂಲಕ ಗ್ರಾಹಕರ ಸೆಳೆದಿದ್ದ ಆಯೋಜಕರು

ತೋಟದಲ್ಲಿ ರೇವ್‌ ಪಾರ್ಟಿ: ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಮನಗರ: ತಾಲ್ಲೂಕಿನ ವಿಭೂತಿಕೆರೆ ಗ್ರಾಮದ ಮಾವಿನ ತೋಟವೊಂದರಲ್ಲಿ ರೇವ್‌ ಪಾರ್ಟಿ ಮಾಡುತ್ತಿದ್ದವರ ಮೇಲೆ ಪೊಲೀಸರು ಶನಿವಾರ ತಡರಾತ್ರಿ ದಾಳಿ ನಡೆಸಿದ್ದು, 15 ಮಂದಿಯನ್ನು ಬಂಧಿಸಿದ್ದಾರೆ.

ಬೆಂಗಳೂರಿನ ವೆಂಕಟೇಶ್ ಎಂಬುವವರಿಗೆ ಸೇರಿದ 32 ಎಕರೆ ಮಾವಿನ ತೋಟದ ಮಧ್ಯೆ ಪಾರ್ಟಿಗಾಗಿ ಶಾಮಿಯಾನ ಹಾಕಿ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಜೊತೆಗೆ ದೊಡ್ಡ ಧ್ವನಿವರ್ಧಕಗಳನ್ನು ಬಳಸಿಕೊಂಡು ಡಿ.ಜೆ. ಸಂಗೀತ ಮೊಳಗುತಿತ್ತು. ಮದ್ಯದ ಸರಬರಾಜು ಇತ್ತು. ಬೆಂಗಳೂರಿನ ಜೊತೆಗೆ ತಮಿಳುನಾಡು, ಕೇರಳದಿಂದ ನೂರಾರು ಯುವಕ ಯುವತಿಯರು ಪಾಲ್ಗೊಂಡಿದ್ದರು. ಆದರೆ ಇದ್ಯಾವುದಕ್ಕೂ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆದಿರಲಿಲ್ಲ.

‘ಸ್ಥಳೀಯರ ದೂರು ಆಧರಿಸಿ ದಾಳಿ ನಡೆಸಿದ್ದು, ಆಯೋಜಕರಾದ ಪೌರಾಣಿಕ್‌ ಪುರೋಹಿತ್‌, ಮಧುಮಿತಾ, ರಿಚು, ನಬಿರಾ ಸೇರಿದಂತೆ 15 ಮಂದಿಯನ್ನು ಬಂಧಿಸಲಾಗಿದೆ. ಸ್ಥಳದಲ್ಲಿ ಇದ್ದ 17 ಬಾಕ್ಸ್‌ನಷ್ಟು ಮದ್ಯ, ಡಿ.ಜೆ. ಸೌಂಡ್‌ ಉಪಕರಣಗಳು, ಲ್ಯಾಪ್‌ಟಾಪ್‌ ಹಾಗೂ ಹಲವು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ರಾಮನಗರ ಎಸ್ಪಿ ಅನೂಪ್‌ ಶೆಟ್ಟಿ ಮಾಹಿತಿ ನೀಡಿದರು.

ಆನ್‌ಲೈನ್‌ ಮೂಲಕ ಬುಕ್ಕಿಂಗ್‌ 

ರಾಮನಗರದ ಬೆಟ್ಟಗುಡ್ಡಗಳ ನಡುವಿನ ರಮಣೀಯ ತಾಣದಲ್ಲಿ ಪಾರ್ಟಿ ಆಯೋಜಿಸುವುದಾಗಿ ಆಯೋಜಕರು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ್ದರು. ಗ್ರಾಹಕರಿಗಾಗಿ ಬೆಂಗಳೂರಿನಿಂದ ಸಾರಿಗೆ ವ್ಯವಸ್ಥೆಯನ್ನೂ ಕಲ್ಪಿಸಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು