ಕೊಡಗಿನಲ್ಲಿ ರಕ್ಷಣ ಕಾರ್ಯಕ್ಕೆ ಇಳಿದಿರುವ ಯುವಕರೇ ದಯವಿಟ್ಟು ಗಮನಿಸಿ! 

7

ಕೊಡಗಿನಲ್ಲಿ ರಕ್ಷಣ ಕಾರ್ಯಕ್ಕೆ ಇಳಿದಿರುವ ಯುವಕರೇ ದಯವಿಟ್ಟು ಗಮನಿಸಿ! 

Published:
Updated:

ಕೊಡಗಿನಲ್ಲಿ ಮಳೆಯ ಆವಾಂತರಕ್ಕೆ ಸಿಲುಕಿರುವವರ ರಕ್ಷಣೆಗಾಗಿ ಬೇರೆ ಬೇರೆ ಸ್ಥಳಗಳಿಂದ ಆಗಮಿಸಿರುವ ಉತ್ಸಾಹಿ ಯುವಕರು ರಕ್ಷಣಾ ಕಾರ್ಯದಲ್ಲಿ ತೊಡಗುವ ಮುನ್ನ ಈ ಸೂಚನೆಗಳನ್ನು ಪಾಲಿಸುವಂತೆ  ಅನುಭವಿ ರಕ್ಷಣಾ ಕಾರ್ಯಕರ್ತರು ಕೆಲವು ಟಿಪ್ಸ್‌ಗಳನ್ನು ನೀಡಿದ್ದಾರೆ. 

ಸಹಾಯ ಮಾಡುವುದಕ್ಕೆ ತೆರಳುವವರು ದಯಮಾಡಿ ಸಾಹಸಕ್ಕೆ ಇಳಿಯದೇ ಈ ಸೂಚನೆಗಳನ್ನು ಪಾಲಿಸಿಸುವುದು ಉತ್ತಮ. 

* ಯಾವುದೇ ಕಾರಣಕ್ಕೂ ಅಲ್ಲಿನ ಸ್ಥಳೀಯ ಜನರನ್ನು ಸಂಪರ್ಕಿಸದೇ ಮುಂದುವರಿಯಬೇಡಿ... ಅಲ್ಲಿನ ಅಪಾಯಕಾರಿ ಬೆಟ್ಟ ಗುಡ್ಡಗಳು, ನೀರಿನ ಜರಿತದ ಬಗ್ಗೆ  ಅವರಿಗೆ ಪರಿಚಯವಿರುತ್ತದೆ. ಹರಿಯುವ ನೀರು ದಿಕ್ಕು ತಿರುಗಿಸಿಕೊಂಡರೆ ಖಾಲಿಜಾಗದಲ್ಲಿ ನೋಡನೋಡುತ್ತಲೆ ಮೊಣಕಾಲು ಮಟ್ಟಕ್ಕೆ ನೀರು ತುಂಬಿಕೊಳ್ಳುತ್ತದೆ. ನಮಗೆ ಅದು ಗೊತ್ತಿರುವುದಿಲ್ಲ.

* ಕುಸಿತ ಇರೋ ಮನೆ ಹತ್ತಿರ ಅಥವಾ ಗುಡ್ಡದ ಹತ್ತಿರ ಹೋಗಬೇಡಿ. ಕುಸಿದ ಮೇಲೂ ಹೋಗಬೇಡಿ. ಸುರಕ್ಷಿತ ಅಂತರ ಕಾಯ್ದುಕೊಳ್ಳಿ. ಅದು ಇನ್ನಷ್ಟು ಕುಸಿಯೋ ಸಾಧ್ಯತೆಯೆ ಹೆಚ್ಚು. ಅರ್ಧ ಕುಸಿದ ಎಲ್ಲವೂ ಅಪಾಯಕಾರಿ. 

* ಏಕಾಂಗಿಯಾಗಿ ಯಾವುದೇ ಸಾಹಸ ಮಾಡಬೇಡಿ, ಕನಿಷ್ಠ ನಾಲ್ಕು ಜನರ ತಂಡದ ಜತೆಗೆ ಇರುವುದು ಉತ್ತಮ.

*ಒಬ್ಬ ಸ್ಥಳಿಯ ವ್ಯಕ್ತಿ ಜೊತೆಗಿರಲಿ. ಯಾಕೆಂದರೆ ಪ್ರವಾಹದ ಸಂದರ್ಭದಲ್ಲಿ "Evaluation route" ಬಹಳ ಮುಖ್ಯ. ಅದು ಸ್ಥಳೀಯರಿಗೆ ಮಾತ್ರ ತಿಳಿದಿರುತ್ತದೆ.

*ಸೊಂಟದ ಮಟ್ಟದ ನೀರು ರಸ್ತೆ ಮೇಲೆ ಹರಿಯುತ್ತಿದ್ದರೆ ಹರಿವು ನಾರ್ಮಲ್ ಆಗಿದೆ ಅಂತ ಯಾವ ಕಾರಣಕ್ಕೂ ಅದನ್ನ ದಾಟುವ  ಪ್ರಯತ್ನ ಮಾಡಬೇಡಿ. ಅದಕ್ಕೆ life line ಬೇಕೆ ಬೇಕು. ಕೈ ಕೈ ಹಿಡಿದು ದಾಟೋದು ಅಪಾಯಕಾರಿ. ಹಿಂದಿನಿಂದ ಒಂದು ಮರದ ದಿಮ್ಮಿ ಬಂದರೂ ಅದು ನಿಮ್ಮ ಕೈ ಬಿಡಿಸುತ್ತೆ. ಎಲ್ಲರಿಗೂ ಅಪಾಯ. ಎಚ್ಚರವಿರಲಿ.

*ಈಜು ಬರದವರು "life saving jacket" ಇದೆ ಆಂತ ಸಾಹಸಕ್ಕೆ ಇಳಿಯಬೇಡಿ. ಹರಿಯೋ ನೀರಿನಲ್ಲಿ ಅದು ಜೀವ ಉಳಿಸಬಲ್ಲದು ಎಂಬ ಯಾವುದೇ ವಿಶ್ವಾಸ ಇಲ್ಲ.

*ಗೊತ್ತಿರದ ಜಾಗದಲ್ಲಿ ಓಡಾಡುವಾಗ ಹುಷಾರಾಗಿರಿ. ಹೊಂಡ, ಗಟಾರ್,  ಮ್ಯಾನ್ ಹೋಲ್ಸ್ , ಬಾವಿ, ಸಂಪ್, ಟಾಯ್ಲೆಟ್‌ ಗುಂಡಿಗಳು ನಿಮ್ಮ ಕಾಲ ಕೆಳಗಿರಬಹುದು. 

* ವಿದ್ಯುತ್ ತಂತಿಗಳ ಬಗ್ಗೆ ಗಮನವಿರಲಿ.

* ಯಾರಾದರೂ ಸಹಾಯಕ್ಕೆ ಕೂಗುತ್ತ ಇದ್ದರೆ ಗಡಿಬಿಡಿಯಿಂದ ಹೋಗಬೇಡಿ.  ಮೊದಲು ಸರಿಯಾಗಿ ಕೇಳಿಸಿಕೊಳ್ಳಿ, ಅಪಾಯ ಅಂತಾನೆ ಅವರು ಕೂಗುತ್ತಿರುತ್ತಾರೆ. ಅವರಿಗೆ  ಸುರಕ್ಷಿತವಾಗಿರಿ,  ನಿಮ್ಮನ್ನ ರಕ್ಷಿಸಲಾಗುತ್ತಿದೆ, ತಾಳ್ಮೆ ಕಳೆದುಕೊಳ್ಳಬೇಡಿ, ಹೆದರಬೇಡಿ ಅಂತ ಕೂಗಿ ಹೇಳಿ.. ರಕ್ಷಣಾ ತಂಡ ಬಂದ ಮೇಲೆ ಕಾರ್ಯಾಚರಣೆ ನಡೆಸಿ

*ಸರಿಯಾದ ರಕ್ಷಣಾ ಪರಿಕರ, ತಂಡ ಇಲ್ಲದೆ ಎನೂ ಮಾಡಬೇಡಿ. 

*ಯುವತಿಯರು,  ಈಜು ಬರದವರು, ಈ ತರದ ಪರಿಸ್ಥಿತಿಯ ಬಗ್ಗೆ ಅರಿವಿರದವರು ಬೇಸ್ ಕ್ಯಾಂಪ್‌ ಗಂಜಿ ಕೇಂದ್ರ, ನಿರಾಶ್ರಿತರ ಶಿಬಿರದಲ್ಲಿ ಸಹಾಯ ಮಾಡಿ

ಪ್ರಕೃತಿ ವಿಕೋಪದ ನಿರ್ವಹಣೆ  ಸುಲಭವಾದುದಲ್ಲ, ಜಾಗೂರುಕತೆಯಿಂದ ರಕ್ಷನಾ ಕಾರ್ಯದಲ್ಲಿ ತೊಡಗುವುದು ಉತ್ತಮ 

ಬರಹ ಇಷ್ಟವಾಯಿತೆ?

 • 55

  Happy
 • 1

  Amused
 • 0

  Sad
 • 2

  Frustrated
 • 3

  Angry

Comments:

0 comments

Write the first review for this !