ಸೋಮವಾರ, ಜೂನ್ 27, 2022
28 °C

ಶಿವಾಜಿನಗರದಲ್ಲಿ ರಿಜ್ವಾನ್‌ ಅರ್ಷದ್‌ ಜಯ: ಸವದಿಯ ಹಾದಿ ಸುಗಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿವಾಜಿನಗರದಲ್ಲಿ ಕಾಂಗ್ರೆಸ್‌ನ ರಿಜ್ವಾನ್‌ ಅರ್ಷದ್‌ ಗೆಲುವಿನಿಂದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ‘ಭಾಗ್ಯದ ಬಾಗಿಲು’ ತೆರೆದಿದೆ. ಸವದಿ ವಿಧಾನಪರಿಷತ್‌ ಪ್ರವೇಶಕ್ಕೆ ರಿಜ್ವಾನ್‌ ಗೆಲುವು ದಾರಿ ಮಾಡಿಕೊಟ್ಟಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಸವದಿ ಅವರಿಗೆ ಬಿಎಸ್‌ವೈ ಸಂಪುಟದಲ್ಲಿ ಸಚಿವ ಸ್ಥಾನ ಅನಾಯಾಸವಾಗಿ ಸಿಕ್ಕಿತು. ಸಚಿವ ಸ್ಥಾನ ಉಳಿಸಿಕೊಳ್ಳಲು ಆರು ತಿಂಗಳೊಳಗೆ ವಿಧಾನಸಭೆ ಅಥವಾ ವಿಧಾನಪರಿಷತ್‌ ಸದಸ್ಯರಾಗಬೇಕು.

ವಿಧಾನಸಭೆ ಸದಸ್ಯರಾಗಿ ರಿಜ್ವಾನ್‌ ಪ್ರಮಾಣ ವಚನ ಸ್ವೀಕರಿಸುವುದಕ್ಕೆ ಮೊದಲೇ ಪರಿಷತ್‌ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ. ಬಳಿಕ ಆ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.

‘ಉಪಚುನಾವಣೆಯನ್ನು ಯಾವಾಗ ಬೇಕಾದರೂ ನಡೆಸಬಹುದು. ಆದರೆ, ಸರ್ಕಾರ ಒತ್ತಡ ಹೇರಿ ಬೇಗ ನಡೆಸುವ ಸಾಧ್ಯತೆ ಇದೆ. ಸಂಪುಟಕ್ಕೆ ಸವದಿ ಸೇರ್ಪಡೆ ವರಿಷ್ಠರ ಆಯ್ಕೆ ಆಗಿರುವುದರಿಂದ ಅವರಿಗೆ ಆದಷ್ಟು ಬೇಗ ಪರಿಷತ್ತಿನಲ್ಲಿ ಸ್ಥಾನ ಕಲ್ಪಿಸಿಕೊಡಬೇಕಾಗಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು