ವಿಜಯಪುರ: ಕ್ಯಾಂಟರ್‌–ಕ್ರೂಸರ್‌ ಡಿಕ್ಕಿಯಾಗಿ 9 ಮಂದಿ ಯುವಕರ ಸಾವು

ಬುಧವಾರ, ಏಪ್ರಿಲ್ 24, 2019
33 °C

ವಿಜಯಪುರ: ಕ್ಯಾಂಟರ್‌–ಕ್ರೂಸರ್‌ ಡಿಕ್ಕಿಯಾಗಿ 9 ಮಂದಿ ಯುವಕರ ಸಾವು

Published:
Updated:

ವಿಜಯಪುರ: ಕ್ಯಾಂಟರ್ ಹಾಗೂ ಕ್ರೂಸರ್ ಮಧ್ಯೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ 9 ಮಂದಿ ಯುವಕರು ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.  

ಸಿಂದಗಿ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 218ರ ಚಿಕ್ಕಸಿಂದಗಿ ಬಳಿ ಈ ದುರ್ಘಟನೆ ಸಂಭವಿಸಿದೆ. 

ಕ್ರೂಸರ್ ಚಾಲಕನ ಅತಿಯಾದ ವೇಗ ಹಾಗೂ ನಿದ್ರೆಗೆ ಜಾರಿದ್ದೇ ಘಟನೆಗೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೃತರು ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದವರಾಗಿದ್ದು, ಗೋವಾ ಪ್ರವಾಸ ಮುಗಿಸಿಕೊಂಡು, ಸಿಂದಗಿ ಮೂಲಕ ತಮ್ಮೂರಿಗೆ ತೆರಳುವ ವೇಳೆ ಈ ಅಪಘಾತ ಸಂಭವಿಸಿದ್ದು, ಐದು‌ ಜನರಿಗೆ ಗಾಯಗಳಾಗಿದ್ದು, ಮೂವರ ಸ್ಥಿತಿ ಚಿಂತಾಜಕನಕವಾಗಿದೆ. ಗಾಯಾಳುಗಳನ್ನು ಸಿಂದಗಿ ಹಾಗೂ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ‌. 

ಮೃತಪಟ್ಟವರೆಲ್ಲರೂ ಯುವಕರಾಗಿದ್ದು, ಚಿತ್ತಾಪುರದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಆಗಿದ್ದು ವಾಹನ ಸವಾರರು ಪರದಾಡುತ್ತಿದ್ದು, ಸಿಂದಗಿ ಪೊಲೀಸರು ರಸ್ತೆ ಸಂಚಾರಕ್ಕೆ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ. 

ಇನ್ನು ಘಟನೆಗೆ ಯುವಕರು ಹೋಳಿ ಹಬ್ಬ ಆಚರಣೆಗೆ ಬದಲಾಗಿ ಗೋವಾಕ್ಕೆ ತೆರಳಿದ್ರು ಎಂದು ತಿಳಿದು ಬಂದಿದೆ. 

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್ ನಿಕ್ಕಂ ಭೇಟಿ ನೀಡಿ  ಪರಿಶೀಲನೆ‌ ನಡೆಸುತ್ತಿದ್ದಾರೆ.  ಘಟನೆ ಕುರಿತು ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಇನ್ನು ಮೃತರನ್ನು ಸಾಗರ (25), ಚಾಂದಬಾಶಾ (24), ಅಜೀಮ್ (26), ಅಂಬರೀಶ (28), ಶಕೀರ ಕೆ.ಕೆ (25), ಗುರು (32), ಶ್ರೀನಾಥ (30), ಯುನೂಸ್ (27) ಮಂಗಸೂಬ್ (27) ಎಂದು ಗುರುತಿಸಲಾಗಿದೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 7

  Sad
 • 2

  Frustrated
 • 2

  Angry

Comments:

0 comments

Write the first review for this !