ಸೋಮವಾರ, ಜನವರಿ 20, 2020
26 °C

ನಾಳೆ ‘ಕೃಷ್ಣಪಥ‘

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಡಿನ ಹಿರಿಯ ರಾಜಕೀಯ ಮುತ್ಸದ್ದಿ ಮತ್ತು ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ 50 ವಸಂತಗಳ ಸಾರ್ಥಕ ಸಂಸದೀಯ ಬದುಕಿನ ನೆನಪು, ಸಾಧನೆ–ಸಿದ್ಧಿಗಳ ಪರಿಚಯ ಹಾಗೂ ಆಕರ ಗ್ರಂಥಗಳ ಲೋಕಾರ್ಪಣೆ ಸಮಾರಂಭವನ್ನು ಜ.4ರಂದು (ಶನಿವಾರ) ಆಯೋಜಿಸಲಾಗಿದೆ. 

ಸೆಂಟ್ರಲ್‌ ಕಾಲೇಜ್‌ ಆವರಣದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ನಡೆಯುವ ಸಮಾರಂಭದ ಸಾನ್ನಿಧ್ಯವನ್ನು ಡಾ. ನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದಾರೆ. ಮೈಸೂರಿನ ಮುಕ್ತಿದಾನಂದ ಮಹಾರಾಜ್‌ ಅವರು ಕೃಷ್ಣಪಥ ಗ್ರಂಥ ಲೋಕಾರ್ಪಣೆ ಮಾಡಲಿದ್ದಾರೆ. 

ನಿವೃತ್ತ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ ಅವರು ‘ಸ್ಮೃತಿ ವಾಹಿನಿ’ ಜತೆ ಐದು ಗ್ರಂಥಗಳ ಲೋಕಾರ್ಪಣೆ ಮಾಡಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಮನು ಬಳಿಗಾರ ಅವರು ಗ್ರಂಥಗಳ ಪರಿಚಯ ಮಾಡಿಕೊಡಲಿದ್ದಾರೆ. ಕವಿ ಡಾ. ಸಿದ್ದಲಿಂಗಯ್ಯ ಅವರು ಅತಿಥಿಗಳಾಗಿರುತ್ತಾರೆ. ಎಸ್‌.ಎಂ. ಕೃಷ್ಣ, ಕೃಷ್ಣಪಥ ಸಮಿತಿಯ ಗೌರವ ಕಾರ್ಯದರ್ಶಿ ಬಿ.ಎಲ್‌. ಶಂಕರ್ ಮತ್ತು ಗ್ರಂಥಗಳ ಸಂಪಾದಕ ಡಾ. ಕೆ.ಆರ್‌. ಕಮಲೇಶ್‌ ವೇದಿಕೆಯಲ್ಲಿರುತ್ತಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು