ಶುಕ್ರವಾರ, ಫೆಬ್ರವರಿ 21, 2020
31 °C

ಸರ್ದಾರ್‌ ಪಟೇಲ್, ಬೋಸ್‌ ಉಗ್ರವಾದಿಗಳು: ಬಯ್ಯಾಪುರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಷ್ಟಗಿ (ಕೊಪ್ಪಳ ಜಿಲ್ಲೆ): ‘ಸ್ವಾತಂತ್ರ್ಯ ಹೋರಾಟದ ವೇಳೆ ಸರ್ದಾರ್ ವಲ್ಲಭಭಾಯ್‌ ಪಟೇಲ್ ಮತ್ತು ಸುಭಾಷಚಂದ್ರ ಬೋಸ್ ಅವರು ಒಂದು ರೀತಿ ಉಗ್ರವಾದಿಗಳಂತಿದ್ದರು’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಕಾಂಗ್ರೆಸ್‌ ಪಕ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಮಹಾತ್ಮಗಾಂಧಿ ಅವರದ್ದು ಅಹಿಂಸಾತ್ಮಕ ಚಳವಳಿಯಾಗಿತ್ತು. ಆದರೆ, ಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ಪಡೆಯಬೇಕು ಎಂಬುದು ಸರ್ದಾರ್ ಪಟೇಲ್ ಮತ್ತು ಬೋಸ್‌ ಅವರ ಉದ್ದೇಶ ಆಗಿತ್ತು. ಕೊನೆ ಘಳಿಗೆಯಲ್ಲಿ ಕಾಂಗ್ರೆಸ್‌ ಸೇರಿದ್ದ ಪಟೇಲ್ ಅವರನ್ನು ಬಿಜೆಪಿ ತಮ್ಮವರು ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಪಟೇಲರ ದೊಡ್ಡ ಮೂರ್ತಿಯನ್ನೇ ನಿರ್ಮಿಸಿ ವೈಭವೀಕರಿಸಿದ್ದಾರೆ. ಯುವಜನರಲ್ಲಿ ತಪ್ಪುಕಲ್ಪನೆ ಬಿತ್ತುತ್ತಿದ್ದಾರೆ’ ಎಂದರು.

ನಂತರ ಮಾತನಾಡಿದ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ‘ನೀವು ಉಗ್ರವಾದಿಗಳು ಎಂಬ ಪದ ಬಳಸಬಾರದಿತ್ತು’ ಎಂದು ಆಕ್ಷೇಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಯ್ಯಾಪುರ, ‘ನಾನು ಹೇಳಿದ್ದು ಸರಿ. ಬೇಕಾದರೆ, ಇದರ ಬಗ್ಗೆ ಚರ್ಚೆಯಾಗಲಿ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)