ದೆಹಲಿಯತ್ತ ಸತೀಶ್‌ ಜಾರಕಿಹೊಳಿ ಪಯಣ

7

ದೆಹಲಿಯತ್ತ ಸತೀಶ್‌ ಜಾರಕಿಹೊಳಿ ಪಯಣ

Published:
Updated:

ಬೆಂಗಳೂರು: ‘ಇಂದು ಸಂಜೆ ದೆಹಲಿಯಲ್ಲಿ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ, ನಮ್ಮ ಸಮಸ್ಯೆಗಳ ಕುರಿತು ಚರ್ಚಿಸುತ್ತೇನೆ’ ಎಂದು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.

‘ರಾಜ್ಯ ನಾಯಕರು ವಿಧಾನ ಪರಿಷತ್ ಸದಸ್ಯತ್ವ ಕುರಿತು ಚರ್ಚಿಸಲು ದೆಹಲಿಗೆ ಹೋಗಿದ್ದಾರೆ. ಹೀಗಾಗಿ ನಾನು ಅವರ ಜೊತೆಗೆ ಹೋಗಲಿಲ್ಲ. ನಾವು ಪಕ್ಷ ಮತ್ತು ಜಿಲ್ಲೆಯ ಬಗ್ಗೆ ಮಾತನಾಡಲು ಹೋಗುತ್ತಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

ರಾಜ್ಯ ನಾಯಕರ ವಿರುದ್ಧ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು, ‘ರಾಹುಲ್ ಗಾಂಧಿ ಅವರಿಗೆ ರಾಜ್ಯದ ಬೆಳವಣಿಗೆಗಳ ಸಮಗ್ರ ಮಾಹಿತಿ ಇದೆ. ನಾವು ಹೊಸದಾಗಿ ವಿವರಿಸುವಂಥದ್ದು ಏನೂ ಇಲ್ಲ. ನಮ್ಮ ಸಮಸ್ಯೆ ಹೇಳಿಕೊಳ್ಳುತ್ತೇವೆ. ಅವರ ಪ್ರತಿಕ್ರಿಯೆ ಪಡೆದುಕೊಳ್ಳುತ್ತೇವೆ’ ಎಂದರು.

ಸಿದ್ದರಾಮಯ್ಯ ಅವರೊಂದಿಗಿನ ಕೋಲ್ಡ್‌ವಾರ್ ಕುರಿತು ಪ್ರತಿಕ್ರಿಯಿಸಿದ ಸತೀಶ್‌ ‘ಸಿದ್ದರಾಮಯ್ಯ ಅವರ ಬಗ್ಗೆ ಯಾವುದೇ ಕೋಪವಿಲ್ಲ. ಹಿಂದೆ ಎಂದೋ ನಡೆದ ಘಟನೆಯನ್ನು ಈಗ ಮತ್ತೆ ಬೆಳೆಸಲು ಆಗುವುದಿಲ್ಲ. ಇಂದು ಅವರು ಮತ್ತು ನಾನು ಒಂದೇ ಪಕ್ಷದಲ್ಲಿದ್ದೇವೆ. ಅಗತ್ಯವಿದ್ದಾಗ ಅವರನ್ನು ಭೇಟಿ ಮಾಡುತ್ತೇನೆ’ ಎಂದರು.

‘ಸಿದ್ದರಾಮಯ್ಯ ಅವರಿಗೆ ನಮ್ಮ ಅವಶ್ಯಕತೆಯಿದ್ದಾಗ ಅವರ ಪರವಾಗಿ ಕೆಲಸ ಮಾಡಿದ್ದೇವೆ. ಬಾದಾಮಿಯಲ್ಲೂ ನಮ್ಮ‌ ಸಾಮರ್ಥ್ಯ ತೋರಿಸಿದ್ದೇವೆ. ನಂಜನಗೂಡು ಉಪಚುನಾವಣೆ ಸಂದರ್ಭದಲ್ಲಿ ಕೆಲಸ ಮಾಡಿದ್ದೇವೆ. ಪಕ್ಷ ಹೇಳಿದ ಯಾವುದೇ ಕೆಲಸವನ್ನು ನಾವು ನಿರಾಕರಿಸಿಲ್ಲ. ಸಚಿವ ಸ್ಥಾನಕ್ಕೆ ನಾನೇನು ಬೇಡಿಕೆಯಿಟ್ಟಿಲ್ಲ. ಪಕ್ಷ ಕೊಟ್ಟರೆ ಕೆಲಸ ಮಾಡಿ ತೋರಿಸುತ್ತೇನೆ‘ ಎಂದು ತಿಳಿಸಿದರು.

‘ಡಿ.ಕೆ.ಶಿವಕುಮಾರ್ ಅವರು ಮನೆಗೆ ಬಂದ ನಂತರ ಭೇಟಿಯಾಗಿ ಆರೋಗ್ಯ ವಿಚಾರಿಸುತ್ತೇನೆ’ ಎಂದರು.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !