ಬೆಂಗಳೂರು: ಪ್ರವಾಹ ಪೀಡಿತ ಪ್ರದೇಶಗಳಿಂದ ಗುಳೆ ಹೋಗುವ ಮಕ್ಕಳು ರಾಜ್ಯದ ಯಾವುದೇ ಕಡೆಗಳಿಗೆ ತೆರಳಿದರೂ, ದಾಖಲೆಗಳನ್ನು ನೋಡದೆ ಅವರನ್ನು ಯಾವುದೇ ಶಾಲೆಗೆ ತೆಗೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.

ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲ ಶಾಲೆಗಳಿಗೆ ಸುತ್ತೋಲೆ ಕಳುಹಿಸಿದ್ದು, ಮಕ್ಕಳ ಶಿಕ್ಷಣ ಮುಂದುವರಿಸುವುದಕ್ಕೆ ಯಾವುದೇ ಅಡ್ಡಿ ಆಗಬಾರದು ಎಂದು ತಿಳಿಸಲಾಗಿದೆ. ಪ್ರವಾಹದಲ್ಲಿ ಆಧಾರ್, ಜನನ ಪ್ರಮಾಣ ಪತ್ರದಂತಹ ಪ್ರಮುಖ ದಾಖಲೆಗಳು ಕಳೆದು ಹೋದ ಅದೆಷ್ಟೋ ನಿದರ್ಶನಗಳಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಸರ್ಕಾರದ ಈ ನಿರ್ಧಾರ ವನ್ನು‘ಕಾಮ್ಸ್’ ಸಂಘಟನೆ ಸ್ವಾಗತಿಸಿದ್ದು,ಪ್ರವಾಹ ಪೀಡಿತ ಪ್ರದೇಶಗಳ ಮಕ್ಕಳಿಗೆ ತನ್ನ ಸಂಘಟನೆಗೆ ಒಳಪಟ್ಟ 3 ಸಾವಿರ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡುವುದಾಗಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.