ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೈಲಿನಿಂದ ಏಳು ಕೈದಿಗಳು ಪರಾರಿ

Last Updated 23 ಜೂನ್ 2019, 19:39 IST
ಅಕ್ಷರ ಗಾತ್ರ

ನೀಮುಚ್‌ (ಪಿಟಿಐ): ಮಧ್ಯಪ್ರದೇಶದ ಖಾನಾಪಟಿ ಪ್ರದೇಶದ ಉಪ ಜೈಲಿನಿಂದ ನಾಲ್ವರು ಕೈದಿಗಳು ಪರಾರಿಯಾಗಿದ್ದಾರೆ.

ನಾಲ್ಕರಲ್ಲಿ ಇಬ್ಬರು ಮಾದಕ ವಸ್ತು ಕಳ್ಳಸಾಗಣೆ ಪ್ರಕರಣದ ಅಪರಾಧಿಗಳಾಗಿದ್ದರೆ, ಉಳಿದವರು ಕೊಲೆ ಹಾಗೂ ಅತ್ಯಾಚಾರ ಆರೋಪ ಎದುರಿಸುತ್ತಿದ್ದಾರೆ. ‘ಕಬ್ಬಿಣದ ಸಲಾಖೆಯನ್ನು ತುಂಡರಿಸಿ, 22 ಅಡಿ ಉದ್ದದ ಜೈಲು ಗೋಡೆಗೆ ಹಗ್ಗ ಇಳಿಸಿ ಹೊರಗಡೆಯವರ ಸಹಾಯದಿಂದ ಹಾರಿ ಓಡಿಹೋಗಿದ್ದಾರೆ’ ಎಂದು ಜೈಲರ್‌ ಆರ್‌.ಪಿ. ವಾಸುನಯ್‌ ಹೇಳಿದ್ದಾರೆ.

ಕೈದಿಗಳನ್ನುಹುಡುಕಿಕೊಟ್ಟವರಿಗೆ ತಲಾ ₹50 ಸಾವಿರ ಬಹುಮಾನ ನೀಡುವುದಾಗಿ ಪೊಲೀಸ್‌ ಮಹಾನಿರ್ದೇಶಕ (ಕಾರಾಗೃಹ) ಹೇಳಿದ್ದಾರೆ.

ಮೂವರು ಪರಾರಿ: ಪ್ರತ್ಯೇಕ ಅತ್ಯಾಚಾರ ಪ್ರಕರಣದ ಮೂವರು ಅಪರಾಧಿಗಳುರಾಜಸ್ಥಾನದ ಝಲವಾರ್‌ ಜಿಲ್ಲೆಯ ಜೈಲಿನಿಂದ ತ‍ಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT