ಸೋಮವಾರ, ಸೆಪ್ಟೆಂಬರ್ 27, 2021
22 °C

ಹಣ ಪಡೆದು ಬಿಜೆಪಿ ಸೇರಿದ ಶಾಸಕ ಜಾಧವ್‌: ಶಾಮನೂರು ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಬಿಜೆಪಿಯವರಿಂದ ಮೊದಲೇ ಹಣ ಪಡೆದಿರುವುದರಿಂದಲೇ ಚಿಂಚೋಳಿ ಶಾಸಕ ಉಮೇಶ್‌ ಜಾಧವ್‌ ರಾಜೀನಾಮೆ ನೀಡಿದ್ದಾರೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಆರೋಪಿಸಿದರು.

ನಗರದಲ್ಲಿ ಸುದ್ದಿಗಾರರು ಸೋಮವಾರ ಈ ಕುರಿತು ಕೇಳಿದ ಪ್ರಶ್ನೆಗೆ ‘ಉಮೇಶ್‌ ಜಾಧವ್‌ ಹೋಗುತ್ತಾನೆ ಎಂಬುದು ಎಲ್ಲರಿಗೂ ಗೊತ್ತಾಗಿತ್ತು. ಅದು ಮೊದಲೇ ಫಿಕ್ಸ್‌ ಆಗಿತ್ತು’ ಎಂದು ಉತ್ತರಿಸಿದರು.

ಮಲ್ಲಿಕಾರ್ಜುನ ಖರ್ಗೆ ಇದು ತಮ್ಮ ಕೊನೆಯ ಚುನಾವಣೆ ಎಂದಿರುವ ಬಗ್ಗೆ ಕೇಳಿದಾಗ, ‘ನಾವು ಎಲ್ಲರೂ ಹಾಗೆಯೇ ಹೇಳುತ್ತಿರುತ್ತೇವೆ. ಗೆದ್ದ ಮೇಲೆ ಮತ್ತೆ ಟಿಕೆಟ್‌ ಬೇಕು ಎಂದು ಹೊಯ್ಕೋತೇವೆ. ಗೆದ್ದ ಮೇಲೆ ನೋಡೋಣ’ ಎಂದು ನಗೆ ಬೀರಿದರು.

ಕಾಂಗ್ರೆಸ್‌–ಜೆಡಿಎಸ್‌ ಟಿಕೆಟ್‌ ಹೊಂದಾಣಿಕೆ ಕುರಿತ ಪ್ರಶ್ನೆಗೆ, ‘ಎಲ್ಲವೂ ಬಗೆಹರಿಯುತ್ತದೆ. ಮೊದಲು ಚುನಾವಣೆ ಬರಲಿ’ ಎಂದರು.

‘ಜಿಲ್ಲೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಯಾರಿಗೆ ಕೊಡುತ್ತಾರೆ ಎಂಬ ಗೊಂದಲದಲ್ಲಿ ಕಾರ್ಯಕರ್ತರಿದ್ದಾರೆ’ ಎಂದು ಸುದ್ದಿಗಾರರು ಕೇಳಿದಾಗ, ‘ಚುನಾವಣೆ ಘೋಷಣೆ ಆದ ಮೇಲೆ ಕಾರ್ಯಕರ್ತರ ನಡುವಿನ ಗೊಂದಲ ಎಲ್ಲಾ ಸರಿ ಹೋಗುತ್ತದೆ. ಜೆಡಿಎಸ್‌–ಕಾಂಗ್ರೆಸ್‌ ಸೇರಿ ಚುನಾವಣೆ ಎದುರಿಸುತ್ತೇವೆ’ ಎಂದು ಹೇಳಿದರು.

‘ಸಂಸದ ಜಿ.ಎಂ. ಸಿದ್ದೇಶ್ವರ ಒಂದು ಲಕ್ಷ ಬಹುಮತದಿಂದ ಗೆಲ್ಲುತ್ತೇನೆ ಎನ್ನುತ್ತಿದ್ದಾರೆ’ ಎಂಬ ಬಗ್ಗೆ ಗಮನ ಸೆಳೆದಾಗ, ‘ಚುನಾವಣೆಗೆ ನಿಂತವರೆಲ್ಲರೂ ಹೀಗೆ ಹೇಳುತ್ತಾರೆ. ಇದು ಅವರ ಕೊನೆಯ ಚುನಾವಣೆಯೋ ಅಥವಾ ಜನರೇ ಕಳುಹಿಸುತ್ತಾರೋ; ಗೊತ್ತಿಲ್ಲ’ ಎಂದು ವ್ಯಂಗ್ಯವಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು