ಬುಧವಾರ, ಜನವರಿ 29, 2020
30 °C

ಶರತ್‌– ನಾಗರಾಜ್‌ ಬೆಂಬಲಿಗರ ನಡುವೆ ಘರ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಕೋಟೆ: ತಾಲ್ಲೂಕಿನ ಬಾಣಮಾಕನಹಳ್ಳಿಯಲ್ಲಿ ಸೋಮವಾರ ರಾತ್ರಿ ವಿಜಯೋತ್ಸವದ ವೇಳೆ ಹಾಲಿ ಶಾಸಕ ಶರತ್ ಬಚ್ಚೇಗೌಡ ಹಾಗೂ ಎಂ.ಟಿ.ಬಿ ನಾಗರಾಜ್ ಅವರ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದೆ. ಘರ್ಷಣೆಯಲ್ಲಿ ನಾಗರಾಜ್‌ ಬೆಂಬಲಿಗ, ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ಅವರ ತಲೆಗೆ ದೊಣ್ಣೆ ಏಟಿನಿಂದ ಗಾಯಗಳಾಗಿವೆ. ಅವರನ್ನು ಹೊಸಕೋಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟಾಕಿ ಸಿಡಿಸುವ ವಿಷಯದಲ್ಲಿ ವಾಗ್ವಾದ ನಡೆದು ಪರಸ್ಪರ ಹೊಡೆದಾಡಿದ್ದಾರೆ. ಈ ಕುರಿತು ನಂದಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು