ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿದ್ಧಗಂಗಾ ಮಠ; ವಾಹನ ಸಂಚಾರ ಮಾರ್ಗ ಬದಲಾವಣೆ

ದರ್ಶನಕ್ಕೆ ವಿವಿಧ ಭಾಗಗಳಿಂದ ಬರುವ ಭಕ್ತರ ಅನುಕೂಲಕ್ಕೆ ವ್ಯವಸ್ಥೆ
Last Updated 21 ಜನವರಿ 2019, 19:09 IST
ಅಕ್ಷರ ಗಾತ್ರ

ತುಮಕೂರು: ಶಿವಕುಮಾರ ಸ್ವಾಮೀಜಿ ಅವರ ನಿಧನರಾದ ಪ್ರಯುಕ್ತ ದರ್ಶನ ಪಡೆಯಲು ಗಣ್ಯರು, ಅತಿಗಣ್ಯರು, ಜನಪ್ರತಿನಿಧಿಗಳು, ಬರುವ ಭಕ್ತರಿಗೆ ಸುಗಮ ಸಂಚಾರ ವ್ಯವಸ್ಥೆಗೆ ಮಾರ್ಗಗಳನ್ನು ಬದಲಾಯಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ತಿಳಿಸಿದ್ದಾರೆ.

ಬೆಂಗಳೂರು ಕಡೆಯಿಂದ ಸಿದ್ಧಗಂಗಾಮಠಕ್ಕೆ ಬರುವ ಸಾರ್ವಜನಿಕರು: ತುಮಕೂರು–ಗುಬ್ಬಿ ರಿಂಗ್ ರಸ್ತೆ, ರೋಟಿಘರ್ ಬಳಿ ಬಲಕ್ಕೆ ತಿರುಗಿ ಬಟವಾಡಿ 80 ಅಡಿ ರಸ್ತೆ ಮೂಲಕ ಮಿರ್ಜಿ ಪೆಟ್ರೋಲ್ ಬಂಕ್ ಬಳಿ ಬಂದು ಬಟವಾಡಿ ಕೆಳ ಸೇತುವೆ ಸರ್ವಿಸ್ ರಸ್ತೆ ಮೂಲಕ ಇಸ್ರೊ ಆವರಣದಲ್ಲಿ (ಹಳೆಯ ಎಚ್ಎಂಟಿ) ವಾಹನಗಳನ್ನು ನಿಲುಗಡೆ ಮಾಡಿ ಬರಬಹುದು.

ಶಿವಮೊಗ್ಗ ಕಡೆಯಿಂದ ಮಠಕ್ಕೆ ಬರುವ ಭಕ್ತರು: ಬಿ.ಎಚ್. ರಸ್ತೆ ಮೂಲಕ ಸರ್ಕಾರಿ ಜೂನಿಯರ್ ಕಾಲೇಜು ಮೈದಾನಕ್ಕೆ ಬಂದು ಅಲ್ಲಿಂದ ಶೆಟಲ್ ಸರ್ವಿಸ್ ಮುಖಾಂತರ ಮಠಕ್ಕೆ ತೆರಳಬಹುದು.

ಶಿರಾ ಕಡೆಯಿಂದ ಬರುವ ಭಕ್ತರು: ರಂಗಾಪುರ ಬ್ರಿಡ್ಜ್ ಬಳಿ ಸರ್ವಿಸ್ ರಸ್ತೆ ಮುಖಾಂತರ ಶ್ರೀದೇವಿ ಕಾಲೇಜು ರಸ್ತೆ ಮೂಲಕ ಅಶೋಕ ರಸ್ತೆ, ಬಿ.ಎಚ್. ರಸ್ತೆ ಮುಖಾಂತರ ಸರ್ಕಾರಿ ಜೂನಿಯರ್ ಕಾಲೇಜಿಗೆ ಬಂದು ಅಲ್ಲಿಂದ ಬಸ್‌ನಲ್ಲಿ ಬರಬಹುದು.

ಕುಣಿಗಲ್ ಕಡೆಯಿಂದ ಮಠಕ್ಕೆ ಬರುವ ಭಕ್ತರು: ಕುಣಿಗಲ್ ಸರ್ಕಲ್, ಲಕ್ಕಪ್ಪ ಸರ್ಕಲ್, ಬಿ.ಎಚ್. ರಸ್ತೆ ಮೂಲಕ ಬರಬಹುದು.

ಬೆಂಗಳೂರು ಕಡೆಗೆ ಹೋಗುವ ದಾರಿ ಗಳು: ಶಿರಾ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳು: ಶಿರಾ– ಮಧುಗಿರಿ– ಕೊರಟಗೆರೆ ದಾಬಸ್‌ ಪೇಟೆ ಮಾರ್ಗವಾಗಿ ಬೆಂಗಳೂರು ಕಡೆ ತೆರಳಬಹುದು.

ಶಿವಮೊಗ್ಗ ಕಡೆಯಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳು: ಗುಬ್ಬಿ ಗೇಟ್ ರಿಂಗ್ ರಸ್ತೆ ಕುಣಿಗಲ್ ಜಂಕ್ಷನ್ ಬಳಿ ಬಲಕ್ಕೆ ತಿರುಗಿ ಗೂಳೂರು, ಹೊನ್ನುಡಿಕೆ ಮೂಲಕ ಶಿವಗಂಗೆ ಕ್ರಾಸ್, ದಾಬಸ್‌ಪೇಟೆ ಮೂಲಕ ಬೆಂಗಳೂರು ಕಡೆಗೆ ತೆರಳುವ ವ್ಯವಸ್ಥೆಯನ್ನು ಮಾಡಲಾಗಿದೆ.

ಶಿವಮೊಗ್ಗ ಕಡೆಗೆ ಹೋಗುವ ಮಾರ್ಗ: ಬೆಂಗಳೂರಿನಿಂದ ದಾಬಸ್‌ ಪೇಟೆ ಬಳಿ ಶಿವಗಂಗೆ ಕ್ರಾಸ್ ಮುಖಾಂತರ ಶಿವಗಂಗೆ –ಹೊನ್ನುಡಿಕೆಗೆ ಬಂದು ಅಲ್ಲಿಂದ ಹೊನ್ನುಡಿಕೆ ಕ್ರಾಸ್, ನಾಗವಲ್ಲಿ– ಕೆ.ಬಿ. ಕ್ರಾಸ್ ಮೂಲಕ ಗುಬ್ಬಿ ಕಡೆಗೆ ಹೋಗಬಹುದು.

ಬೆಂಗಳೂರಿನಿಂದ ಶಿರಾ ಮತ್ತು ಚಿತ್ರ ದುರ್ಗ, ಬಳ್ಳಾರಿ (ಉತ್ತರ ಕರ್ನಾಟಕ) ಕಡೆಗೆ ಹೋಗುವ ವಾಹನಗಳು ದಾಬಸ್ ಪೇಟೆ, ಊರ್ಡಿಗೆರೆ, ಕೊರಟಗೆರೆ, ಮಧುಗಿರಿ, ಬಡವನಹಳ್ಳಿ ಮೂಲಕ ಶಿರಾ ಕಡೆ ತೆರಳುವುದು.

ತುಮಕೂರು ನಗರಕ್ಕೆ ಬರುವ ದಾರಿಗಳು: ಬೆಂಗಳೂರು ಕಡೆಯಿಂದ ತುಮಕೂರು ನಗರಕ್ಕೆ ಬರುವ ಸಾರ್ವಜನಿಕರು ಗುಬ್ಬಿ ರಿಂಗ್ ರಸ್ತೆ ಮೂಲಕ ತುಮಕೂರು ನಗರಕ್ಕೆ ಪ್ರವೇಶಿಸುವುದು.

ಶಿರಾ ಕಡೆಯಿಂದ ತುಮಕೂರು ನಗರಕ್ಕೆ ಬರುವ ಸಾರ್ವಜನಿಕರು ರಂಗಾಪುರ ಸೇತುವೆ ಬಳಿ ಸರ್ವಿಸ್ ರಸ್ತೆ ಮುಖಾಂತರ ಶ್ರೀದೇವಿ ಕಾಲೇಜು ರಸ್ತೆ ಮೂಲಕ ತುಮಕೂರು ನಗರಕ್ಕೆ ಪ್ರವೇಶಿಸುವುದು. ಎಲ್ಲ ವಾಹನಗಳಿಗೆ ಕ್ಯಾತ್ಸಂದ್ರ ಬಳಿ ರಾಷ್ಟ್ರೀಯ ಹೆದ್ದಾರಿ– 4ರ ಸರ್ಕಲ್ ವರೆಗಿನ ಸಂಚಾರವನ್ನು ನಿಷೇಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT