ಅರಕಲಗೂಡು: ತಾಲ್ಲೂಕಿನ ಅತ್ನಿ ದಾಖ್ಲೆ ಸಿದ್ದಾಪುರ ಗ್ರಾಮದ ಯೋಧ ಹವಾಲ್ದಾರ್ ಮಲ್ಲೇಶ್ (41) ಅರುಣಾಚಲ ಪ್ರದೇಶದ ಇಟಾನಗರ ಸಮೀಪ ಮೃತಪಟ್ಟಿದ್ದಾರೆ.

ಶನಿವಾರ ಸಂಜೆ ಕರ್ತವ್ಯ ಮುಗಿಸಿ ವಾಪಸಾಗುತ್ತಿದ್ದ ವೇಳೆ ಗುಡ್ಡ ಕುಸಿದು ಮೃತಪಟ್ಟರು ಎನ್ನಲಾಗಿದ್ದು, ಸಾವಿನ ಕುರಿತು ಸೇನಾ ಮೂಲಗಳಿಂದ ಕುಟುಂಬಕ್ಕೆ ಮಾಹಿತಿ ದೊರೆತಿದೆ.

ಇವರು 18 ವರ್ಷಗಳಿಂದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಾಮಾನ್ಯ ಸೇವಾ ಅವಧಿ ಮುಗಿದಿದ್ದರೂ ಸ್ವಯಂ ಇಚ್ಛೆಯಿಂದ ಸೇವೆಯಲ್ಲಿ ಮುಂದುವರೆದಿದ್ದರು. ಇವರಿಗೆ ತಾಯಿ ಪುಟ್ಟಮ್ಮ, ಪತ್ನಿ ಪೂರ್ಣಿಮಾ, ಮಕ್ಕಳಾದ ರುತ್ವಿಕ್, ಶ್ರೇಯಸ್ ಹಾಗೂ 4 ಮಂದಿ ಸಹೋದರರು ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.