ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವು S/O ಮುದ್ದೆಗೌಡ | ಫೇಸ್‌ಬುಕ್‌ ಪೇಜ್‌ ವಿರುದ್ಧ ಜೆಡಿಎಸ್ ದೂರು

ಅದು ಫೇಸ್‌ಬುಕ್‌ ಅಲ್ಲ, ಟ್ವಿಟರ್‌ ಪುಟ ಎಂದ ನೆಟ್ಟಿಗರು
Last Updated 21 ನವೆಂಬರ್ 2019, 4:18 IST
ಅಕ್ಷರ ಗಾತ್ರ

ಬೆಂಗಳೂರು: ನಮ್ಮ ಪಕ್ಷದ ನಾಯಕರವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕುವ ಮೂಲಕಉಪಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಆರೋಪಿಸಿ ದೇವು S/O ಮುದ್ದೆಗೌಡ ಟ್ವಿಟರ್‌ ಖಾತೆವಿರುದ್ಧ ಮುಖ್ಯ ಚುನಾವಣಾಧಿಕಾರಿಗಳಿಗೆ ಜೆಡಿಎಸ್‌ ದೂರು ನೀಡಿದೆ.

ಜೆಡಿಎಸ್‌ ನೀಡಿರುವ ದೂರಿನಲ್ಲಿ, ‘ಮಣ್ಣಿನ ಮಕ್ಕಳ ಕಣ್ಣೀರು ಪಕ್ಷದ ಪ್ರಣಾಳಿಕೆ, ನಿಮ್ಮ ಓಟು ನಮ್ಮ ಸೀಟು’ ಹೀಗೆ ಹಲವು ರೀತಿಯ ಪ್ರಚೋದನಕಾರಿ ಮತ್ತು ಅವಹೇಳನಕಾರಿ ಪೋಸ್ಟ್‌ಗಳನ್ನುಹಾಕಲಾಗುತ್ತಿದೆ. ರಾಷ್ಟ್ರೀಯ ಅಧ್ಯಕ್ಷರಾದ ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಮುಖಂಡರ ವಿರುದ್ಧ ಅವಹೇಳನಕಾರಿ ಪೋಸ್ಟ್‌ಗಳನ್ನು ಹಾಕುತ್ತಾ, ಉಪಚುನಾವಣೆಯಲ್ಲಿ ನಮ್ಮ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ. ಇದು ಚುನಾವಣಾ ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದ್ದು, ಸೂಕ್ತ ಕ್ರಮ ಜರುಗಿಸಿ ಸಂಬಂಧಿಸಿದರಿಗೆ ನಿರ್ದೇಶನ ನೀಡಬೇಕೆಂದುಕೇಳಿಕೊಳ್ಳುತ್ತೇವೆ ಎಂದು ಉಲ್ಲೇಖಿಸಲಾಗಿದೆ.

ಅಂದಹಾಗೆ ಜೆಡಿಎಸ್‌ ಉಲ್ಲೇಖಿಸಿರುವ ದೇವು S/O ಮುದ್ದೆಗೌಡ ಹೆಸರಿನ ಪುಟ ಸಕ್ರಿಯವಾಗಿರುವುದು ಟ್ವಿಟರ್‌ನಲ್ಲಿ,ಫೇಸ್‌ಬುಕ್‌ನಲ್ಲಿ ಅಲ್ಲ.ದೂರು ಸಂಬಂಧಆ ಪುಟದಲ್ಲಿ ಪ್ರತಿಕ್ರಿಯೆ ನೀಡಲಾಗಿದೆ. ಜೆಡಿಎಸ್‌ ಪಕ್ಷದವರಿಗೆ ಟ್ವಿಟರ್ ಹಾಗೂ ಫೇಸ್‌ಬುಕ್‌ ನಡುವಿನ ವ್ಯತ್ಯಾಸವೇ ಗೊತ್ತಿಲ್ಲ ಎಂದು ಹಲವರು ಕಿಚಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT