ಪಕ್ಷ ಭೇದ ಮರೆತು ಅನಂತಕುಮಾರ್‌ ಸಾಧನೆ ನೆನೆದ ರಾಜ್ಯ ನಾಯಕರು

7

ಪಕ್ಷ ಭೇದ ಮರೆತು ಅನಂತಕುಮಾರ್‌ ಸಾಧನೆ ನೆನೆದ ರಾಜ್ಯ ನಾಯಕರು

Published:
Updated:

ಬೆಂಗಳೂರು: ನಗರದಲ್ಲಿ ಸೋಮವಾರ ನಸುಕಿನಲ್ಲಿ ನಿಧನರಾದ ಕೇಂದ್ರ ಸಚಿವ ಅನಂತಕುಮಾರ್ ಅವರ ಸದ್ಗುಣಗಳನ್ನು ರಾಜ್ಯದ ಹಿರಿಯ ರಾಜಕಾರಿಣಿಗಳು ಪಕ್ಷಭೇದ ಮರೆತು ನೆನಪಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ ಸೂಚಿಸಿದ್ದಾರೆ.

‘ಅನಂತಕುಮಾರ್ ನಿಧನದಿಂದ ನನಗೆ ನೋವಾಗಿದೆ. ಜನಪರ ಮತ್ತು ಮೌಲ್ಯಾಧಾರಿತ ರಾಜಕಾರಣ ಮಾಡುತ್ತಿದ್ದ ಅನಂತಕುಮಾರ್ ಸಂಸದರಾಗಿ ಮತ್ತು ಕೇಂದ್ರ ಸಚಿವರಾಗಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದರು. ವೈಯಕ್ತಿಕವಾಗಿ ನಾನು ಒಬ್ಬ ಉತ್ತಮ ಗೆಳೆಯನನ್ನು ಕಳೆದುಕೊಂಡಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವಿಟ್ ಮಾಡಿದ್ದಾರೆ.

‘ಉತ್ತಮ ವಾಗ್ಮಿಯೂ ಆಗಿದ್ದ ಅನಂತಕುಮಾರ್ ನಮ್ಮ ತಲೆಮಾರಿನ ಚತುರ ರಾಜಕಾರಿಣಿ. ಜ್ಞಾನ, ಅನುಭವ ಮತ್ತು ಹಾಸ್ಯಪ್ರಜ್ಞೆ ಅವರಲ್ಲಿ ಮೇಳೈಸಿತ್ತು’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಟ್ವಿಟ್ ಮಾಡಿದ್ದಾರೆ.

‘ಉತ್ತಮ ಸಂಸದೀಯ ಪಟು, ಕೇಂದ್ರ ಸಚಿವ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ಶ್ರೀ ಅನಂತಕುಮಾರ್ ಅವರ ನಿಧನ ತೀವ್ರ ಆಘಾತಕಾರಿಯಾದ ವಿಷಯ. ಅವರ ನಿಧನದಿಂದ ದೇಶದ ರಾಜಕಾರಣಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಕುಟುಂಬಕ್ಕೆ ಬಂಧು ಬಳಗದವರಿಗೆ ಅಭಿಮಾನಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ, ಮೃತರ ಆತ್ಮಕ್ಕೆ ಶಾಂತಿ ದೊರಕಲಿ’ ಎಂದು ಕರ್ನಾಟಕ ಕಾಂಗ್ರೆಸ್‌ ಟ್ವಿಟ್ ಮಾಡಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ‘ಘನತೆಯಿಂದ ರಾಜಕಾರಣ ನಿಭಾಯಿಸಿದ ಧೀಮಂತ ನಾಯಕನನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪಕ್ಷಸಂಘಟನೆಯಲ್ಲಿ ಹೆಗಲೆಣೆಯಾಗಿದ್ದ ಅನಂತಕುಮಾರ್ ಅವರನ್ನು ನೆನೆದಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ‘ಎಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಉತ್ತಮ ಸಲಹೆಗಳನ್ನು ನೀಡಿ ಪಕ್ಷದ ಬೆಳವಣಿಗೆಗೆ ಕಾರಣವಾಗಿದ್ದ ಇವರ ಕೊಡುಗೆಗಳನ್ನು ಎಂದಿಗೂ ಮರೆಯಲಾಗದು’ಎಂದು ಟ್ವಿಟ್ ಮಾಡಿದ್ದಾರೆ.

ಅನಂತ್‌ಕುಮಾರ್ ಅವರ ಆತ್ಮೀಯರೂ ಆಗಿದ್ದ ಶಾಸಕ ಸುರೇಶ್‌ಕುಮಾರ್, ‘ಜಯನಗರದ ನಮ್ಮ‌ವಿಜಯಕುಮಾರ್ ಅವರನ್ನು‌ ಕಳೆದುಕೊಂಡ ಕೆಲವೇ ತಿಂಗಳುಗಳಲ್ಲಿ ನಾವು‌ ನಮ್ಮ ಅನಂತಕುಮಾರರನ್ನೂ ಕಳೆದುಕೊಂಡಿದ್ದೇವೆ.‌ ಉತ್ತಮ ರಾಜಕೀಯ ಇನ್ನಷ್ಟು ಬಡವಾಗಿದೆ.’ ಎಂದು ಟ್ವಿಟ್ ಮಾಡಿದ್ದಾರೆ. ‘ಆಪ್ತ ಗೆಳೆಯನ ಅಗಲಿಕೆ ಆಘಾತ ತಂದಿದೆ. ಅನಂತ್ ಇಲ್ಲದ ಬಿಜೆಪಿಯನ್ನು ಊಹಿಸಲಿಕ್ಕೂ ಆಗುವುದಿಲ್ಲ’ ಎಂದು ಹೇಳಿದ್ದಾರೆ.

‘ದೇಶದಾದ್ಯಂತ ಬಿಜೆಪಿ ಸಂಘಟನೆ ಬಲಪಡಿಸಲು ಶ್ರಮಿಸಿದವರು ನನ್ನ ಗುರು ಅನಂತಕುಮಾರ್’ ಎಂದು ಸಂಸದೆ ಶೋಭಾ ಕರಂದ್ಲಾಜೆ ನೆನಪಿಸಿಕೊಂಡಿದ್ದಾರೆ.

***

ಬಿಜೆಪಿ ನಾಯಕ, ಕೇಂದ್ರ ಸಚಿವ ಅನಂತ್‌ಕುಮಾರ್ ಇನ್ನಿಲ್ಲ

ವಿಶಿಷ್ಟ ಆಲೋಚನೆಗಳ ಸಂಘಟನಾ ಚತುರ

ನಾಳೆ ಮಧ್ಯಾಹ್ನ 1ಕ್ಕೆ ಚಾಮರಾಜಪೇಟೆಯಲ್ಲಿ ಅಂತ್ಯಸಂಸ್ಕಾರ

ಸರ್ಕಾರಿ ಕಚೇರಿ, ಬ್ಯಾಂಕ್‌, ಶಿಕ್ಷಣ ಸಂಸ್ಥೆಗಳಿಗೆ ರಜೆ

*  ಅನಂತಕುಮಾರ್‌ ಕೇಂದ್ರ, ರಾಜ್ಯ ಸರ್ಕಾರಕ್ಕೆ ಕೊಂಡಿಯಂತೆ ಇದ್ದರು: ಯಡಿಯೂರಪ್ಪ

‘ಬಿಜೆಪಿಯ ಬಹುದೊಡ್ಡ ಆಸ್ತಿ’: ಅನಂತಕುಮಾರ್ ಸೇವೆ ನೆನಪಿಸಿಕೊಂಡ ರಾಷ್ಟ್ರ ನಾಯಕರು

* ಒಳ್ಳೆಯವರಿಗೆ ದೇವರು ಅನ್ಯಾಯ ಮಾಡಿಬಿಟ್ಟ; ಸಂಸದ ಪ್ರಹ್ಲಾದ ಜೋಶಿ

ಅನಂತಕುಮಾರ ವ್ಯಕ್ತಿಯಲ್ಲ, ಶಕ್ತಿಯಾಗಿದ್ದರು: ಸಚಿವ ಡಿ.ವಿ.ಸದಾನಂದಗೌಡ 

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 3

  Sad
 • 0

  Frustrated
 • 2

  Angry

Comments:

0 comments

Write the first review for this !