ಬುಧವಾರ, ಜೂನ್ 23, 2021
22 °C

ನಾಳೆಯಿಂದ ರಾಜ್ಯ ರ್‍ಯಾಂಕಿಂಗ್‌ ಟೇಬಲ್‌ ಟೆನಿಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ‘ಕರ್ನಾಟಕ ರಾಜ್ಯ ರ್‍ಯಾಂಕಿಂಗ್‌ ಟೇಬಲ್‌ ಟೆನಿಸ್‌ ಪಂದ್ಯಾವಳಿ ಆ. 29ರಿಂದ 31ರ ವರೆಗೆ ನಗರದ ತುಂಗಭದ್ರಾ ರಿಕ್ರಿಯೇಷನ್‌ ಕ್ಲಬ್‌ನಲ್ಲಿ ಜರುಗಲಿದೆ’ ಎಂದು ಬಳ್ಳಾರಿ ಜಿಲ್ಲಾ ಟೇಬಲ್‌ ಟೆನಿಸ್‌ ಅಸೋಸಿಯೇಶನ್‌ ಕಾರ್ಯದರ್ಶಿ ಸಿ. ಗುಣಲನ್‌ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆ. 29ರಂದು ಪುರುಷ ಮತ್ತು ಮಹಿಳೆಯರ ಹಿರಿಯರ ವಿಭಾಗ, ಯುತ್‌ ವಿಭಾಗದ ಪಂದ್ಯಗಳು ನಡೆದರೆ, ಆ. 30ರಂದು ಯುತ್‌ ಬಾಯ್ಸ್‌ ಹಾಗೂ ಯುತ್‌ ಗರ್ಲ್ಸ್‌, ಜೂನಿಯರ್‌, ಸಬ್‌ ಜೂನಿಯರ್‌ ವಿಭಾಗದ ಪಂದ್ಯಗಳು, ಆ. 31ರಂದು ಸಬ್‌ ಜೂನಿಯರ್‌ ಹಾಗೂ ಕೆಡೆಟ್‌ ವಿಭಾಗ ಪಂದ್ಯಗಳು ನಡೆಯಲಿವೆ. ಎಲ್ಲ ವಿಭಾಗದ ಅಂತಿಮ ಹಂತದ ಪಂದ್ಯಗಳು ಆಯಾ ದಿನದಂದೇ ಜರುಗಲಿವೆ’ ಎಂದು ಮಾಹಿತಿ ನೀಡಿದರು.

‘ಈಗಾಗಲೇ ಆನ್‌ಲೈನ್‌ ಮೂಲಕ 306 ಜನ ಪಂದ್ಯಾವಳಿಗೆ ಹೆಸರು ನೋಂದಣಿ ಮಾಡಿಸಿದ್ದಾರೆ. ಒಟ್ಟು ₹1.30 ಲಕ್ಷ ನಗದು ಬಹುಮಾನ ಇಡಲಾಗಿದೆ. ನಿತ್ಯ ಒಂದು ಪಂದ್ಯವನ್ನು ಆನ್‌ಲೈನ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು. ಆಸಕ್ತರು tt1 ವೆಬ್‌ಸೈಟಿಗೆ ಭೇಟಿ ಕೊಟ್ಟು ಪಂದ್ಯ ವೀಕ್ಷಿಸಬಹುದು’ ಎಂದು ವಿವರಿಸಿದರು.

‘ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿರುವ ಕ್ರೀಡಾ ಪಟುಗಳು ಪಂದ್ಯಾವಳಿಯಲ್ಲಿ ಭಾಗವಹಿಸುವರು. ಸ್ಥಳೀಯ ಸೇರಿದಂತೆ ರಾಜ್ಯದ ಯಾವುದೇ ಭಾಗದವರು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ’ ಎಂದು ತಿಳಿಸಿದರು. ಅಸೋಸಿಯೇಶನ್‌ ಸದಸ್ಯ ವಿಜಯಕುಮಾರ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು