ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ವಾಡಿ ದುರಂತ: ವಿಚಾರಣೆ ಆಗಸ್ಟ್ 5ಕ್ಕೆ ಮುಂದೂಡಿಕೆ

Last Updated 10 ಜುಲೈ 2019, 8:46 IST
ಅಕ್ಷರ ಗಾತ್ರ

ಚಾಮರಾಜನಗರ: ಹನೂರು ತಾಲ್ಲೂಕಿನ ಸುಳ್ವಾಡಿ ಮಾರಮ್ಮ ದೇವಾಲಯದಲ್ಲಿ ನಡೆದ ವಿಷ ಪ್ರಸಾದ ದುರಂತ ಪ್ರಕರಣದ ವಿಚಾರಣೆಯನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಆಗಸ್ಟ್‌ 5ಕ್ಕೆ ಮುಂದೂಡಿದೆ.

ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾಗಿದ್ದರಿಂದ ಮೈಸೂರಿನ ಕಾರಾಗೃಹದಲ್ಲಿರುವ ಆರೋಪಿಗಳಾದ ಇಮ್ಮಡಿ ಮಹಾದೇವಸ್ವಾಮಿ, ಮಾದೇಶ, ಅಂಬಿಕಾ ಮತ್ತು ದೊಡ್ಡಯ್ಯ ಅವರನ್ನು ಪೊಲೀಸರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಬಿ. ಬಸವರಾಜ ಅವರ ಮುಂದೆ ಹಾಜರು ಪಡಿಸಿದರು.

ಹೊಸ ವಕೀಲ: ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಾಧೀಶರು, ‘ನಿಮ್ಮ ವಕೀಲರು ಬಂದಿದ್ದಾರೆಯೇ’ ಎಂದು ಮೊದಲ ಆರೋಪಿ ಮಹಾದೇವಸ್ವಾಮಿ ಅವರನ್ನು ಕೇಳಿದರು.

ಇದಕ್ಕೆ ಅವರು, ‘ಹಿಂದಿನ ವಕೀಲರು ಬಂದಿಲ್ಲ. ಹೊಸ ವಕೀಲರು ಬಂದಿದ್ದಾರೆ’ ಎಂದರು. ‘ಮಹಾದೇವಸ್ವಾಮಿ ಅವರ ಪರವಾಗಿ ನಾನು ವಕಾಲತ್ತು ವಹಿಸುತ್ತೇನೆ’ ಎಂದು ರಾಮನಗರದ ವಕೀಲ ಪಿ.ಎಂ.ವಿಶ್ವನಾಥ್ ನ್ಯಾಯಾಧೀಶರಿಗೆ ತಿಳಿಸಿದರು. ವಾದ ಮಾಡಲು ಸಮಯವನ್ನೂ ಕೇಳಿದರು.

ಉಳಿದ ಮೂವರು ಆರೋಪಿಗಳ ಪರ ವಕೀಲರು ಬಂದಿರಲಿಲ್ಲ. ‘ಯಾಕೆ ಬಂದಿಲ್ಲ’ ಎಂದು ನ್ಯಾಯಾಧೀಶರು ಕೇಳಿದಾಗ, ಆರೋಗ್ಯ ಸರಿ ಇಲ್ಲ ಎಂದು ಆರೋಪಿಗಳು ಉತ್ತರಿಸಿದರು.

ನಂತರ ನ್ಯಾಯಾಧೀಶರು ವಿಚಾರಣೆಯನ್ನು ಆಗಸ್ಟ್‌ 5ಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT