ಬುಧವಾರ, ಏಪ್ರಿಲ್ 14, 2021
24 °C

ಕಾರು-ಬಸ್ ಡಿಕ್ಕಿ: ಮೂವರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಳ್ಯ: ಇಲ್ಲಿಗೆ ಸಮೀಪ ಮಾಣಿ -ಮೈಸೂರು ಹೆದ್ದಾರಿಯ ಅರಂಬೂರು ಬಳಿ ಭಾನುವಾರ ಬೆಳಿಗ್ಗೆ ಕಾರು ಹಾಗೂ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ರಾಮನಗರ ಜಿಲ್ಲೆಯ ಚನ್ನಪಟ್ಟಣದ ತಾಲ್ಲೂಕಿನ ಮೂವರು ಮೃತಪಟ್ಟಿದ್ದಾರೆ.

ಚನ್ನಪಟ್ಟಣ ತಾಲ್ಲೂಕಿನ ಕೋಲೂರು ಮುದುಗೆರೆ ನಿವಾಸಿಗಳಾದ ಮಂಜುಳಾ, ಸೋಮಣ್ಣ ಮತ್ತು ನಾಗೇಂದ್ರ ಮೃತಪಟ್ಟವರು. ಕಾರಿನಲ್ಲಿದ್ದ 12 ವರ್ಷದ ತನ್ಮಯಿ ಹಾಗೂ ಇನ್ನೊಬ್ಬ ಮಹಿಳೆ ಜಯಶೀಲಾ ಅವರಿಗೆ ಸಾಮಾನ್ಯ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಎಸ್‌ಆರ್‌ಟಿಸಿ ಬಸ್, ಮಂಗಳೂರಿನಿಂದ ಮಡಿಕೇರಿ ಮಾರ್ಗವಾಗಿ ಕೊಳ್ಳೇಗಾಲಕ್ಕೆ ತೆರಳುತ್ತಿತ್ತು. ಕಾರು ರಾಮನಗರದಿಂದ ಮಂಗಳೂರಿಗೆ ಬರುತ್ತಿತ್ತು. ಸುಳ್ಯದ ಅರಂಬೂರು ಬಳಿ ರಿಕ್ಷಾ ಹಿಂದಿಕ್ಕುವ ಯತ್ನದಲ್ಲಿದ್ದ ರಿಟ್ಜ್ ಕಾರು ಹಾಗೂ ಬಸ್‌ ಮಧ್ಯೆ ಡಿಕ್ಕಿ ಸಂಭವಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು