ಮಂಗಳವಾರ, ಮೇ 26, 2020
27 °C

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಟೀಕೆ: ಇಬ್ಬರು ಶಿಕ್ಷಕರ ಅಮಾನತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕೊರೊನಾ ಸಂಕಷ್ಟ ಪರಿಸ್ಥಿತಿ ನಿರ್ವಹಣೆಗೆ ಸಾರ್ವಜನಿಕರಿಂದ ದೇಣಿಗೆ ಕೋರಿದ ಮುಖ್ಯಮಂತ್ರಿ ನಿರ್ಧಾರವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಶ್ನಿಸಿದ, ಟೀಕಿಸಿದ ಇಬ್ಬರು ಶಿಕ್ಷಕರನ್ನು ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ ಸೋಮವಾರ ಅಮಾನತು ಮಾಡಿದ್ದಾರೆ.

ಸೊರಬ ತಾಲ್ಲೂಕು ಆನವಟ್ಟಿಯ ಸಿಆರ್‌ಪಿ ರಾಜು, ತಿಮ್ಮಾಪುರ ಸರ್ಕಾರಿ ಶಾಲೆಯ ಶಿಕ್ಷಕ ಢಾಕ್ಯಾನಾಯ್ಕ ಅಮಾನತುಗೊಂಡವರು.

‘ಹಲೋ ಸಿಎಂ ಸಾಹೇಬರೇ, ಸಾರ್ವಜನಿಕರಿಂದ ಹಣ ಕೇಳಿದ್ದೀರಿ. ಹಣದ ಲಿಸ್ಟ್ ಇಲ್ಲಿದೆ ನೋಡಿ’ ಎಂಬ ವಾಯ್ಸ್‌ ರೆಕಾರ್ಡ್ ಇರುವ ಮಾಹಿತಿ ಸಾಮಾಜಿಕ ಜಾಲತಾಣಗಳಿಗೆ ಫಾರ್ವರ್ಡ್‌ ಮಾಡಿದ್ದಲ್ಲದೇ, ‘ರಿಯಲಿ ರೈಟ್‌’ ಎಂದು ಪ್ರತಿಕ್ರಿಯಿಸಿದ್ದರು. 

‘ಈ ಇಬ್ಬರು ಶಿಕ್ಷಕರು ಕೊರೊನಾ ನಿರ್ಬಂಧದ ಸಮಯದಲ್ಲಿ ಮನೆಯಲ್ಲೇ ಕುಳಿತು ಸರ್ಕಾರದ ಕೆಲಸಕ್ಕೆ ನೆರವಾಗುವ ಬದಲು, ಸರ್ಕಾರದ ವಿರುದ್ಧ ಟೀಕೆ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಹಾಗಾಗಿ, ಅವರನ್ನು ಅಮಾನತು ಮಾಡಲಾಗಿದೆ’ ಎಂದು ಸಿಇಒ ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು