ಗುರುವಾರ , ಜೂನ್ 24, 2021
21 °C

ವರ್ಗಾವಣೆ: ಮತ್ತೆ ಪರಿಷ್ಕೃತ ವೇಳಾಪಟ್ಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ವೃಂದದ ಅಂತರ ಘಟಕ ವರ್ಗಾವಣಾ ಕೌನ್ಸೆಲಿಂಗ್‌ಗೆ ಗುರುವಾರ ಪುನರ್ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಲಾಗಿದೆ.

‘ತಾಂತ್ರಿಕ ಅಡಚಣೆಯಿಂದ ನಿಗದಿತ ವೇಳಾಪಟ್ಟಿಯಂತೆ ಕೌನ್ಸೆಲಿಂಗ್‌ ಕ್ರಮ ನಡೆಸಲಾಗುತ್ತಿಲ್ಲ. ಹೊಸ ವೇಳಾಪಟ್ಟಿಯಂತೆ ಶಿಕ್ಷಕರು ಕೌನ್ಸೆಲಿಂಗ್‌ಗೆ ಹಾಜರಾಗಬೇಕು. ಅನಿವಾರ್ಯ ಕಾರಣಗಳಿಂದ ಕ್ರಮಸಂಖ್ಯೆಯಂತೆ ಕೌನ್ಸೆಲಿಂಗ್‌ ನಡೆಯದಿದ್ದರೆ ಬದಲಾದ ದಿನಾಂಕವನ್ನು ತಕ್ಷಣ ಪ್ರಕಟಿಸಲಾಗುವುದು’ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

ಇದೇ 20ರಂದು 1,001ರಿಂದ 1,250 ಕ್ರಮಸಂಖ್ಯೆವರೆಗಿನ (ನಾಲ್ಕೂ ವಿಭಾಗಗಳು ಸೇರಿ) ಶಿಕ್ಷಕರು ಹಾಗೂ 21ರಂದು 1,251ರಿಂದ 1,500 ಕ್ರಮಸಂಖ್ಯೆವರೆಗಿನ ಶಿಕ್ಷಕರು ಕೌನ್ಸೆಲಿಂಗ್‌ಗೆ ಹಾಜರಾಗಬೇಕು. 11,340 ಕ್ರಮಸಂಖ್ಯೆಯವರೆಗೆ ಶಿಕ್ಷಕರಿಗೆ ಕೌನ್ಸೆಲಿಂಗ್‌ ನಡೆಯಲಿದ್ದು, ಉಳಿದವರ ಕೌನ್ಸೆಲಿಂಗ್‌ ದಿನಾಂಕವನ್ನು ಬಳಿಕ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು