ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಪ್ರಯೋಗಾಲಯಗಳ ಬಳಕೆಗೆ ಚಿಂತನೆ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಅನುಮತಿಗಾಗಿ ಐಸಿಎಂಆರ್‌ ಜತೆ ಚರ್ಚೆ
Last Updated 21 ಮಾರ್ಚ್ 2020, 12:09 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ರಾಜ್ಯದಲ್ಲಿ ಕೋವಿಡ್‌ ಸೋಂಕು ಪತ್ತೆ ಕಾರ್ಯಕ್ಕೆ ಕೈಜೋಡಿಸಲು ಕೆಲ ಪ್ರತಿಷ್ಠಿತ ಖಾಸಗಿ ಪ್ರಯೋಗಾಲಯಗಳು ಮುಂದೆ ಬಂದಿವೆ. ಅದಕ್ಕೆ ‘ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ’ (ಐಸಿಎಂಆರ್‌) ಅನುಮತಿ ನೀಡಿದರೆ ಖಾಸಗಿ ಪ್ರಯೋಗಾಲಯಗಳನ್ನೂ ಬಳಸಿಕೊಳ್ಳಲಾಗುತ್ತದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅತ್ಯಾಧುನಿಕ ಪ್ರಯೋಗಾಲಯಗಳನ್ನು ಹೊಂದಿರುವ ಬಯೋಕಾನ್, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸೇರಿದಂತೆ ಕೆಲ ವೈದ್ಯಕೀಯ ಕಾಲೇಜುಗಳು ಕೋವಿಡ್‌ ಪತ್ತೆಗೆ ಸಹಕಾರ ನೀಡಲು ಮುಂದೆ ಬಂದಿವೆ. ಆದರೆ, ಇದಕ್ಕೆ ಐಸಿಎಂಆರ್‌ ಅನುಮತಿ ಬೇಕು. ಆ ನಿಟ್ಟಿನಲ್ಲಿ ಚರ್ಚೆ ನಡೆಸಿರುವೆ’ ಎಂದು ತಿಳಿಸಿದರು.

‘ಪ್ರಾದೇಶಿಕವಾರು ವೈರಾಣು ಪರೀಕ್ಷಾ ಪ್ರಯೋಗಾಲಯ ತೆರೆಯುವ ಕೆಲಸ ಮಾಡುತ್ತೇವೆ. ತಲಾ 10 ಲಕ್ಷ ಜನರಲ್ಲಿ ಕನಿಷ್ಠ 150 ಜನರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಇದರಿಂದ ಕೊರಾನಾ ವೈರಸ್‌ ಸೋಂಕು ಸಮುದಾಯದಲ್ಲಿ ಹರಡಿದೆಯೇ ಇಲ್ಲವೇ ಎಂಬುದು ಗೊತ್ತಾಗಲಿದೆ’ ಎಂದರು.

‘ರಾಜ್ಯದಲ್ಲಿ ಪ್ರಸ್ತುತ ಏಳು ವೈರಾಣು ಪರೀಕ್ಷಾ ಪ್ರಯೋಗಾಲಯಗಳಿವೆ. ಆದರೂ, ರಕ್ತ ತಪಾಸಣೆ ಕೇಂದ್ರದಂತೆ ನಮ್ಮಲ್ಲೂ ಈ ಪ್ರಯೋಗಾಲಯ ಮಾಡಿ ಎಂದು ಜನ ಆಗ್ರಹಿಸುತ್ತಾರೆ. ಎಲ್ಲೆಂದರಲ್ಲಿ ಈ ಪ್ರಯೋಗಾಲಯ ಸ್ಥಾಪಿಸಲು ಸಾಧ್ಯವಿಲ್ಲ. ಸ್ವಲ್ಪ ಎಡವಟ್ಟಾದರೆ ಈ ಪ್ರಯೋಗಾಲಯಗಳೇ ಸೋಂಕು ಹರಡುವ ಕೇಂದ್ರಗಳಾಗಿ ಪರಿಣಮಿಸುತ್ತವೆ. ಬಹಳಷ್ಟು ಜನರಿಗೆ ಈ ಬಗ್ಗೆ ಅರಿವಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT